ಬೆಂಗಳೂರು : ದೇಶೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಮತ್ತು ಅದರ ಉಪ ಸಂಸ್ಥೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಗುರುವಾರ 16 ದೇಶಗಳಲ್ಲಿರುವ ಭಾರತೀಯರನ್ನು ಹೊತ್ತು ತರಲಿದೆ.
ಈ ಬಗ್ಗೆ ಮಾಹಿತಿ ನೀಡಿದ ನಾಗರಿಕ ವಿಮಾನಯಾನ ಸಂಸ್ಥೆಯ ಮಹಾ ನಿರ್ದೇಶಕ ಅರುಣ್ ಕುಮಾರ್, ನಿನ್ನೆಯೇ ಭಾರತೀಯರನ್ನು ಹೊತ್ತು ತರುವ ಕಾರ್ಯ ಆರಂಭವಾಗಬೇಕಿತ್ತು. ಆದರೆ ಎಲ್ಲಾ ಸಿಬ್ಬಂದಿಯನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಬೇಕಾಗಿದ್ದರಿಂದ ಒಂದು ದಿನ ತಡವಾಯಿತು ಎಂದರು.
ಇಂದು ನಾಲ್ಕು ವಿಮಾನಗಳು ದೆಹಲಿಯಿಂದ ಸಾನ್ ಫ್ರಾನ್ಸಿಸ್ಕೊ, ಕೊಚ್ಚಿಯಿಂದ ಅಬು ದಾಬಿ, ದೆಹಲಿಯಿಂದ ಸಿಂಗಾಪುರ ಮತ್ತು ಕಲ್ಲಿಕೋಟೆಯಿಂದ ದುಬೈಗೆ ಹಾರಾಟ ನಡೆಸಲಿವೆ. ಇಂದಿನಿಂದ ಭಾರತಕ್ಕೆ ಕರೆತರಲಾಗುತ್ತದೆ ಎಂದು ಹೇಳಿದರು.
ಒಂದು ವಾರದಲ್ಲಿ ಏರ್ ಇಂಡಿಯಾ 12 ದೇಶಗಳಿಂದ 64 ವಿಮಾನಗಳಲ್ಲಿ 14 ಸಾವಿರದ 800 ಮಂದಿಯನ್ನು ಕರೆತರಲಾಗುತ್ತದೆ ಎಂದು ಮೊನ್ನೆ ನಾಗರಿಕ ವಿಮಾನಯಾನ ಸಚಿವಾಲಯ ಹೊರಡಿಸಿರುವ ಪ್ರಕಟಣೆ ತಿಳಿಸಿದೆ.
ನಿನ್ನೆ ಏರ್ ಇಂಡಿಯಾ ಪೋರ್ಟಲ್ ಟಿಕೆಟ್ ಬುಕ್ಕಿಂಗ್ ಆರಂಭಿಸಿದೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಅರುಣ್ ಕುಮಾರ್, ಭಾರತೀಯರನ್ನು ಕರೆತರುವ ಯೋಜನೆಯಲ್ಲಿ ಸ್ವಲ್ಪ ವಿಳಂಬವಾಯಿತು. ನಿನ್ನೆ ಪೈಲಟ್ ಗಳು ಮತ್ತು ವಿಮಾನದ ಸಿಬ್ಬಂದಿಯ ಕೋವಿಡ್-19 ಪರೀಕ್ಷೆಯನ್ನು ಮಾಡಬೇಕಾಯಿತು. ಅದು ಪೂರ್ಣವಾಗಿದ್ದು ನಾಳೆಯಿಂದ ಕಾರ್ಯಾಚರಣೆ ಆರಂಭವಾಗಲಿದೆ. ವಿದೇಶಗಳಿಗೆ ಹೋಗಲು ಬಯಸುವ ಭಾರತೀಯರು ಸಹ ಆಲೋಚನೆ ಮಾಡಬಹುದು ಎಂದು ತಿಳಿಸಿದರು.
Follow us on Social media