ಬೆಂಗಳೂರು: ಜಾಗತಿಕ ದ್ವಿಚಕ್ರ ವಾಹನ ಮತ್ತು ತ್ರಿಚಕ್ರ ವಾಹನಗಳ ತಯಾರಕರಾದ ಟಿವಿಎಸ್ ಮೋಟಾರ್ ಕಂಪನಿ ಹೊಸೂರು, ಮೈಸೂರು ಮತ್ತು ನಲಘರ್ ನ ಎಲ್ಲಾ ಕಾರ್ಖಾನೆಗಳಲ್ಲಿ ಉತ್ಪಾದನೆಯನ್ನು ಪುನಾರಂಭಿಸಿದೆ.
ಟಿವಿಎಸ್ ಮೋಟಾರ್ ಕಂಪನಿಗೆ ನೌಕರರು ಮತ್ತು ಸಮುದಾಯದ ಸುರಕ್ಷತೆ ಅತ್ಯಂತ ಮಹತ್ವದ್ದಾಗಿದೆ. ವೈರಸ್ ಹರಡುವುದನ್ನು ತಡೆಯಲು ಲು ಸಹಾಯ ಮಾಡಲು ಅಗತ್ಯ ಸುರಕ್ಷತಾ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಅನುಸರಿಸುವುದನ್ನು ಖಚಿತಪಡಿಸಿಕೊಂಡಿದ್ದು ನೌಕರರಿಗಾಗಿ ಸಮಗ್ರ ಸಿದ್ಧತೆ ಕೈಪಿಡಿಯನ್ನು ವಿನ್ಯಾಸಗೊಳಿಸಲಾಗಿದೆ. ತನ್ನ ಎಲ್ಲಾ ಉತ್ಪಾದನಾ ಸೌಲಭ್ಯಗಳಲ್ಲಿ, ಸೂಕ್ತವಾದ ಸಾಮಾಜಿಕ ಅಂತರ ಹಾಗೂ ನೈರ್ಮಲ್ಯದಗುಣಮಟ್ಟವನ್ನು ಹೊಂದಿದೆ.
ದ್ಯೋಗಿಗಳಿಗೆ ಸುರಕ್ಷಿತ ಕೆಲಸದ ಸ್ಥಳವನ್ನು ಖಚಿತಪಡಿಸಿಕೊಳ್ಳಲು ಕಂಪನಿ ಸೂಕ್ತ ಕ್ರಮ ಕೈಗೊಂಡಿದೆ. ಆಯಾ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿ ಕೆಲವು ವರ್ಗದ ಜನರಿಗೆ ಮನೆಯಿಂದಲೇ ಕೆಲಸಕ್ಕೆ ಸಹ ಅವಕಾಶ ಕಲ್ಪಿಸಿದೆ ಎಂದು ಪ್ರಕಟಣೆ ಹೇಳಿದೆ.
ಟಿವಿಎಸ್ ಮೋಟಾರ್ ಕಂಪನಿ ಹೆಸರಾಂತ ದ್ವಿಚಕ್ರ ವಾಹನ ತಯಾರಕ ಮತ್ತು 8.5 ಬಿಲಿಯನ್ ಯುಎಸ್ಡಿ ಟಿವಿಎಸ್ ಗ್ರೂಪ್ನ ಪ್ರಮುಖ ಕಂಪನಿಯಾಗಿದೆ.
Follow us on Social media