ಬೆಂಗಳೂರು: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ (Rajya Sabha election 2022) ಬಿಜೆಪಿಯ ಅಭ್ಯರ್ಥಿ ನಿರ್ಮಲಾ ಸೀತಾರಾಮನ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜೈರಾಂ ರಮೇಶ್ ಅವರಿಗೆ ಮೊದಲ ಸುತ್ತಿನ ಪ್ರಾಶಸ್ತ್ಯ ಮತಗಳಲ್ಲಿ ಗೆಲುವು ಸಿಕ್ಕಿದೆ. ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಎರಡನೇ ಬಾರಿಗೆ ಕರ್ನಾಟಕದಿಂದ ರಾಜ್ಯಸಭೆಗೆ ಆರಿಸಿ ಬರುತ್ತಿದ್ದಾರೆ. ಅವರಿಗೆ ಮೊದಲ ಸುತ್ತಿನ 46 ಪ್ರಾಶಸ್ತ್ಯ ಮತಗಳು ಸಿಕ್ಕಿವೆ.
ಇನ್ನು ಎರಡನೇ ಪ್ರಾಶಸ್ತ್ಯ ಮತದಲ್ಲಿ ನಟ ಜಗ್ಗೇಶ್ ಅವರಿಗೆ 44 ಮತಗಳು ಸಿಕ್ಕಿದ್ದು, ಬಿಜೆಪಿಯಲ್ಲಿ ಒಂದು ಮತವನ್ನು ಕೊನೆ ಕ್ಷಣದವರೆಗೆ ಉಳಿಸಿಕೊಳ್ಳಲಾಗಿದೆ. ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಅವರಿಗೆ 32 ಮತಗಳು ಲಭಿಸಿವೆ.ನಿರ್ಮಲಾ ಸೀತಾರಾಮನ್ ಬಳಿಯಿರುವ ಮೊದಲ ಪ್ರಾಶಸ್ತ್ಯದ 1.17 ಮತಗಳು ಲೆಹರ್ ಸಿಂಗ್ ಗೆ ವರ್ಗಾವಣೆಯಾಗಲಿದ್ದು, ಲೆಹರ್ ಸಿಂಗ್ ಗೆ 33.17 ಮತಗಳಾಗಿವೆ. ಮೊದಲ ಪ್ರಾಶಸ್ತ್ಯದಲ್ಲಿ ಕಾಂಗ್ರೆಸ್ ಅಥವಾ ಜೆಡಿಎಸ್ ಮತಗಳು 33.17 ದಾಟಿದರೆ ಮನ್ಸೂರ್ ಖಾನ್ ಅಥವಾ ಕುಪೇಂದ್ರ ರೆಡ್ಡಿಗೆ ಗೆಲುವು ಸಿಗಲಿದೆ. ಇಲ್ಲದಿದ್ದರೆ ಲೆಹರ್ ಸಿಂಗ್ ಗೆಲುವು ನಿಶ್ಚಿತ.
ಕಾಂಗ್ರೆಸ್ ಅಭ್ಯರ್ಥಿ ಜೈರಾಂ ರಮೇಶ್ ಅವರಿಗೆ 46 ಮೊದಲ ಪ್ರಾಶಸ್ತ್ಯ ಮತಗಳು ಸಿಕ್ಕಿವೆ. ಕಾಂಗ್ರೆಸ್ ಅಥವಾ ಜೆಡಿಎಸ್ ನಿಂದ ಅಡ್ಡ ಮತದಾನವಾದರೆ ಲೆಹರ್ ಸಿಂಗ್ ಗೆ ಸಿಗುವ ಮತಗಳು ಹೆಚ್ಚುತ್ತಾ ಹೋಗುತ್ತವೆ.
ಬಿಜೆಪಿಯ ಎಲ್ಲಾ ಶಾಸಕರ ಮತಗಳು ಪೂರ್ಣವಾಗಿದೆ. ಕಾಂಗ್ರೆಸ್ ಶಾಸಕರ 50 ಶಾಸಕರು, ಜೆಡಿಎಸ್ ನ 15 ಶಾಸಕರು ಮತ ಹಾಕಿದ್ದಾರೆ.
Follow us on Social media