ಬೆಂಗಳೂರು: ಕರ್ನಾಟಕದಲ್ಲಿ ಇಂದು 416 ಜನರಿಗೆ ಕೊರೋನಾ ವೈರಸ್ ದೃಢವಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8697ಕ್ಕೆ ಏರಿಕೆಯಾಗಿದೆ.
ಇಂದು ಸಂಜೆ ಕರ್ನಾಟಕ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ಕ್ ಬುಲೆಟಿನ್ ನಲ್ಲಿ ಈ ಬಗ್ಗೆ ಮಾಹಿತಿ ಲಭಿಸಿದ್ದು, ಕಳೆದ 24 ಗಂಟೆಗಳಲ್ಲಿ ರಾಜ್ಯಾದ್ಯಂತ ಒಟ್ಟು 416 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 8697ಕ್ಕೇರಿಕೆಯಾಗಿದೆ.
ಅಂತೆಯೇ ಇಂದು 9 ಮಂದಿ ಸೋಂಕಿತರು ಮೃತಪಟ್ಟಿದ್ದು, ಇಲ್ಲಿಯವರೆಗೆ 136 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 181 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ 5391 ಮಂದಿ ಚೇತರಿಕೆ ಕಂಡಿದ್ದು, 3170 ಸಕ್ರಿಯ ಪ್ರಕರಣಗಳಿವೆ.
416 ಪ್ರಕರಣಗಳ ಪೈಕಿ 116 ಮಂದಿ ಹೊರರಾಜ್ಯ ಮತ್ತು 22 ಮಂದಿ ಹೊರರಾಷ್ಟ್ರದ ಪ್ರಯಾಣದ ಇತಿಹಾಸ ಹೊಂದಿದ್ದಾರೆ. ರಾಜಧಾನಿ ಬೆಂಗಳೂರು ನಗರದಲ್ಲಿ 94, ಬೀದರ್‌ನಲ್ಲಿ 73, ಬಳ್ಳಾರಿ, ರಾಮನಗರದಲ್ಲಿ ತಲಾ 38, ಕಲಬುರಗಿಯಲ್ಲಿ 34, ಮೈಸೂರಿನಲ್ಲಿ 22, ಹಾಸನದಲ್ಲಿ 16, ರಾಯಚೂರಿನಲ್ಲಿ 15, ಉಡುಪಿಯಲ್ಲಿ 13, ಹಾವೇರಿಯಲ್ಲಿ 12, ವಿಜಯಪುರದಲ್ಲಿ 9, ಚಿಕ್ಕಮಗಳೂರಿನಲ್ಲಿ 8, ಧಾರವಾಡ, ಚಿಕ್ಕಬಳ್ಳಾಪುರದಲ್ಲಿ ತಲಾ 5, ದಕ್ಷಿಣ ಕನ್ನಡ, ಕೋಲಾರ, ಮಂಡ್ಯ, ಕೋಲಾರ, ಬೆಂಗಳೂರು ಗ್ರಾಮಾಂತರದಲ್ಲಿ ತಲಾ 4, ದಾವಣಗೆರೆಯಲ್ಲಿ 3, ಬಾಗಲಕೋಟೆ, ಶಿವಮೊಗ್ಗ, ಗದಗ, ತುಮಕೂರಿನಲ್ಲಿ ತಲಾ 2, ಬೆಳಗಾವಿ, ಚಾಮರಾಜನಗರದಲ್ಲಿ ತಲಾ 1 ಪ್ರಕರಣಗಳು ವರದಿಯಾಗಿವೆ.
ಬೆಂಗಳೂರು ನಗರದಲ್ಲಿ 46 ವರ್ಷದ ವ್ಯಕ್ತಿ, ದಾವಣಗೆರೆಯಲ್ಲಿ 90 ವರ್ಷದ ವ್ಯಕ್ತಿ, ಚಿಕ್ಕಮಗಳೂರಿನಲ್ಲಿ 72 ವರ್ಷದ ಮಹಿಳೆ, ಉಡುಪಿಯಲ್ಲಿ 54, ಬೀದರ್‌ನಲ್ಲಿ 51 ವರ್ಷದ ಹೆಣ್ಣು, 65 ವರ್ಷದ ಗಂಡು,ಬೆಂಗಳೂರು ನಗರದ 56, 39 ವರ್ಷದ ವ್ಯಕ್ತಿ ಮತ್ತು ಅಂತಾರಾಜ್ಯ ಪ್ರಯಾಣದ ಹಿನ್ನೆಲೆಯುಳ್ಳ 66 ವರ್ಷದ ಮಹಿಳೆ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
Follow us on Social media