ಬೆಂಗಳೂರು: ಕರ್ನಾಟಕದಲ್ಲಿ ಕೊರೋನಾ ಮರಣ ಮೃದಂಗ ಮುಂದುವರಿಸಿದ್ದು, ಕೊವಿಡ್-19ಗೆ ಗುರುವಾರ ಮತ್ತೊಬ್ಬ ಮಹಿಳೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸಾವಿನ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.
ಮಂಗಳೂರಿನ ಕೊವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 78 ವರ್ಷದ ವೃದ್ಧೆ ಇಂದು ಸಂಜೆ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ. ಇಂದು ಮೃತಪಟ್ಟ ವೃದ್ಧೆಯ ಸೊಸೆ ಏಪ್ರಿಲ್ 18 ರಂದು ಕೊರೋನಾ ವೈರಸ್ ಬಲಿಯಾಗಿದ್ದರು.
ಈ ಮಧ್ಯೆ ಸೋಂಕಿತರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಒಂದೇ 18 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 445ಕ್ಕೆ ಏರಿಕೆಯಾಗಿದೆ.
ಇಂದು ಬೆಳಗ್ಗೆ 16 ಮಂದಿಗೆ ಹಾಗೂ ಸಂಜೆ ಇಬ್ಬರಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ. ಸೋಂಕಿನಿಂದ ಇಲ್ಲಿಯವರೆಗೆ 17 ಜನರು ಮೃತಪಟ್ಟಿದ್ದು, 145 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇಂದು ಬೆಂಗಳೂರು ನಗರದಲ್ಲಿ 10, ವಿಜಯಪುರದಲ್ಲಿ 2, ಹುಬ್ಬಳ್ಳಿಯಲ್ಲಿ 2, ಮಂಡ್ಯದಲ್ಲಿ 2 ಹಾಗೂ ಕಲಬುರ್ಗಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗುವೆ.
ಬೆಂಗಳೂರಿನ ಸೋಂಕಿತ 419ರ ಸಂಪರ್ಕದಿಂದ ಬರೋಬ್ಬರಿ 9 ಜನರಿಗೆ ಸೋಂಕು ಹರಡಿದೆ. ಇವರೆಲ್ಲರೂ ಬೆಂಗಳೂರಿನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಂಕಿತ ಪ್ರರಕರಣಗಳ ವಿವರ
ಸೋಂಕಿತ 428, ವಿಜಯಪುರದ 32 ವರ್ಷದ ವ್ಯಕ್ತಿಯಾಗಿದ್ದು, ಅವರು ಸೋಂಕಿತ 221ರ ಸಂಪರ್ಕದಲ್ಲಿದ್ದರು. ಅವರನ್ನು ವಿಜಯಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಂಕಿತೆ 429 ವಿಜಯಪುರದ 25 ವರ್ಷದ ಮಹಿಳೆಯಾಗಿದ್ದು, ಅವರ ಸೋಂಕಿಗೆ ಕಾರಣವಾದ ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ. ಅವರನ್ನು ಕೂಡ ವಿಜಯಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಂಕಿತ 430 ಹುಬ್ಬಳ್ಳಿ-ಧಾರವಾಡದ 30 ವರ್ಷದ ಮಹಿಳೆಯಾಗಿದ್ದು, ಇವರು ಸೋಂಕಿತ 236ರ ಸಂಪರ್ಕದಲ್ಲಿದ್ದರು.
ಸೋಂಕಿತ 431 ಹುಬ್ಬಳ್ಳಿ ಧಾರವಾಡದ ಬಾಲಕಿಯಾಗಿದ್ದು, ಸೋಂಕಿತೆ 236ರ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ.
ಸೋಂಕಿತ 432 ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವೃದ್ಧೆಯಾಗಿದ್ದು, ಅವರು ಸೋಂಕಿತೆ 390ರ ಸಂಪರ್ಕದಲ್ಲಿದ್ದರು. ಅವರನ್ನು ಜಿಲ್ಲೆಯ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಂಕಿತರಾದ 433, 434, 435, 436,437, 438, 439, 440, 441, ಬೆಂಗಳೂರು ನಗರದ ನಿವಾಸಿಗಳಾಗಿದ್ದು, ಎಲ್ಲರೂ ಪುರುಷರು. ಅವರೆಲ್ಲರೂ ಸೋಂಕಿತ 419ರ ಸಂಪರ್ಕದಲ್ಲಿದ್ದರು. ಅವರನ್ನು ನಿಗದಿತ ಆಸ್ಪತ್ರೆಗೆ ಸೇರಿಸಲಾಗಿದೆ.
ಸೋಂಕಿತ 442 ಮಂಡ್ಯ ಜಿಲ್ಲೆಯ 47 ವರ್ಷದ ಪುರುಷ ವ್ಯಕ್ತವಾಗಿದ್ದು, ಅವರು ಸೋಂಕಿತ 171, 371ರ ಸಂಪರ್ಕದಲ್ಲಿದ್ದರು.
ಸೋಂಕಿತ 443, ಮಂಡ್ಯ ಜಿಲ್ಲೆಯ ಮಳವಳ್ಳಿಯ, 28 ವರ್ಷದ ಮಹಿಳೆಯಾಗಿದ್ದು, ಅವರು ರೋಗಿ 179ರ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ.
Follow us on Social media