Breaking News

ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿ: ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಕೊಪ್ಪಳ: ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದು, ಸಂವಿಧಾನಿಕ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅಸಂವಿಧಾನಿಕ ಮುಖ್ಯಮಂತ್ರಿ ವಿಜಯೇಂದ್ರ. ಹೀಗಾಗಿ ಬಿಜೆಪಿಯಲ್ಲಿ ಭುಗಿಲೆದ್ದಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಬಿಜೆಪಿ ಶಾಸಕರಿಗೆ ನೀಡಲಾದ ಅನುದಾನವನ್ನು ವಾಪಾಸ್ ತೆಗೆದುಕೊಂಡಿದ್ದಾರೆ. ಮತ್ತೆ ಪ್ರತ್ಯೇಕ ಅನುದಾನವನ್ನೂ ಕೊಟ್ಟಿಲ್ಲ. ಹಾಗಾಗೇ ಶಾಸಕರು ಬಂಡಾಯ ಹೇಳುತ್ತಿದ್ದಾರೆ ಎಂದರು. 

ಬಿಜೆಪಿಯಲ್ಲಿ ಭಿನ್ನಮತ ಇರುವುದು ಸತ್ಯ ಎಂಬ ಯತ್ನಾಳ್ ಹೇಳಿಕೆಗೆ  ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಡಿಯೂರಪ್ಪ ನಮ್ಮ ನಾಯಕ ಅಲ್ಲ. ಮೋದಿ, ಅಮಿತ್ ಷಾ, ನಡ್ಡಾ ನಮ್ಮ ನಾಯಕರು ಎಂದಿದ್ದಾರೆ. ಹಾಗಾಗಿ ಬಿಜೆಪಿ ಭಿನ್ನಮತದಲ್ಲಿ ಕೈಹಾಕಲ್ಲ. ಬಿಜೆಪಿ ಸರ್ಕಾರ ಬಿದ್ದರೇ ನಾವು ಜವಾಬ್ದಾರರಲ್ಲ ಎಂದರು.

ಸಿದ್ದರಾಮಯ್ಯ ಬೊಕ್ಕಸ ಖಾಲಿ ಮಾಡಿದ್ದಾರೆ ಎಂದು ಹೇಳುವ ಸಿಟಿ ರವಿಗೆ  ಹಣಕಾಸಿನ ಬಗ್ಗೆ ಅಜ್ಞಾನ ಇದೆ.‌ ಹಾಗಾಗಿ ದುರುದ್ದೇಶ ಪೂರತ ಹೇಳಿಕೆ ನೀಡುತ್ತಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಕುಸಿದಾಗಲೂ, ನಮ್ಮ ಅವಧಿಯಲ್ಲಿ ಆರ್ಥಿಕ ಶಿಸ್ತಿನಲ್ಲಿ ಕರ್ನಾಟಕ ಸರ್ಕಾರ ಮೊದಲನೇ ಸ್ಥಾನದಲ್ಲಿತ್ತು. ಆರ್ ಬಿಐ  ಸೇರಿದಂತೆ ಹಲವು ಸಮೀಕ್ಷೆಗಳು ಹೇಳಿವೆ. ಅಲ್ಲದೇ ಮನಮೋಹನ್ ಸಿಂಗ್ ದೇಶ ಕಂಡ ಅತ್ಯುತ್ತಮ ಆರ್ಥಿಕ ತಜ್ಞ. ಅವರು ಕೂಡಾ ಹೇಳಿದ್ದರು. ಸೋಮಣ್ಣ ಯಾವ ಆರ್ಥಿಕ ತಜ್ಞ ಎಂದು ಲೇವಡಿ ಮಾಡಿದರು.

ಪ್ರಸ್ತುತ ಆರ್ಥಿಕತೆ ದಿವಾಳಿಯಾಗಿದೆ. ಬೊಕ್ಕಸದಲ್ಲಿ ಸಂಬಳ ನೀಡಲು ಕೂಡಾ ದುಡ್ಡಿಲ್ಲ. ಇದು ರಾಜ್ಯದ ಪರಿಸ್ಥಿತಿ ಅಲ್ಲ‌. ಇಡೀ ದೇಶದ ಪರಿಸ್ಥಿತಿ. ಕೇಂದ್ರ ಸಂಖ್ಯಾ ಇಲಾಖೆ ಹೇಳಿದಂತೆ ಜಿಡಿಪಿ 6.7ರಷ್ಟು ಹೆಚ್ಚಾಗಬೇಕಿತ್ತು. ಆದರೆ ಕೇವಲ ಶೇ 4.7ರಷ್ಟು ಹೆಚ್ಚಾಗಬೇಕಿದೆ. ಇದು ಹೀಗೆ ಮುಂದುವರೆದರೆ ಋಣಾತ್ಮಕ ಪ್ರಗತಿ ಕಾಣಲಿದೆ. ಇದೇ ಮೋದಿ ಸಾಧನೆ ಎಂದರು‌. ಡಿಕೆಸಿ ಮತ್ತು ನನ್ನ ಮಧ್ಯ ಒಳ್ಳೆಯ ಬಾಂಧವ್ಯ ಇದೆ ಎಂದು ಸ್ಪಷ್ಟಪಡಿಸಿದರು. 

ಕೊರೋನಾದಲ್ಲಿ ಸಿದ್ದರಾಮಯ್ಯ ಪಿಎಚ್ ಡಿ ಮಾಡಿದ್ದಾರಾ ಎಂಬ ಬಿ.ಸಿ.ಪಾಟೀಲ ಪ್ರಶ್ನೆ ಉತ್ತರಿಸಿ, ಕೊರೋನಾ ಎಚ್ಚರಿಕೆ ವಹಿಸಲು ಸಾಮಾನ್ಯ ಜ್ಞಾನ ಬೇಕು. ಇದಕ್ಕೆ ಪಿಎಚ್ ಡಿ ಬೇಕಾಗಿಲ್ಲ. ಇದನ್ನು ಬಿಸಿ ಪಾಟೀಲ್ ಗೆ  ತಿಳಿಸಿ ಎಂದರು.

ಮಕ್ಕಳಿಂದ ಕೊರೋನಾ ಹರಡತ್ತಿದೆ. ಶಾಲೆ ಆರಂಭಿಸಲು ಶಿಕ್ಷಣ ಸಚಿವರು ಆಸಕ್ತಿ ತೋರುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇನ್ನೂ ಎರಡು ತಿಂಗಳು ಶಾಲೆಗಳನ್ನು ಆರಂಭಿಸಬಾರದು. ಬಳಿಕ ಪೂರ್ವಸಿದ್ಧತೆ ಕೈಗೊಳ್ಳಬೇಕು. ಮಕ್ಕಳಿಗೆಮಾಸ್ಕ್, ಸ್ಯಾನಿಟೈಸರ್  ವಿತರಿಸಬೇಕು. ದೂರ ದೂರ ಕೂರಿಸಬೇಕು. ಎಚ್ಚರಿಕೆ ವಹಿಸಿದರೇ, ಸಾಮಾಜಿಕ ಅಂತರ ಕಾಪಾಡಿದರೇ ಕೊರೋನಾ ಹರಡುವುದಿಲ್ಲ. ಶಾಲೆ ಆರಂಭ  ಆಗದಿದ್ದರೆ ಓತಿಕ್ಯಾತ ಹೊಡಿಯೋಕೆ ಹೋಗ್ತಾ ಇದ್ವಿ. ಮಕ್ಕಳೂ ಹಾಗೇ ಮಾಡುತ್ತವೆ ಎಂದು ಹಾಸ್ಯ ಮಾಡಿದರು.
 
ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡಲಾಗಿದೆ. ಆದರೆ ಇದಕ್ಕೆ ಸಂವಿಧಾನಿಕವಾಗಿ ಮಸೂದೆ ಅಂಗೀಕರಿಸಬೇಕಿತ್ತು. ಇದನ್ನು ರಾಜ್ಯ ಸರ್ಕಾರ ಮಾಡಿಲ್ಲ. ಗ್ರಾಮ ಪಂಚಾಯಿತಿಗಳಿಗೆ ನಾಮನಿರ್ದೇಶನ ಮಾಡುವುದಕ್ಕೆ ಅವಕಾಶ ಇಲ್ಲ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಗುರಿತಿಸಿಕೊಂಡವರೇ ಹೆಚ್ಚು ಜನ ಗೆದ್ದಿದ್ದಾರೆ. ಈ ಭಯದಿಂದಾಗಿ ಬಿಜೆಪಿಯವರು ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡುತ್ತಿದ್ದಾರೆ ಎಂದರು.

ಬಿಜೆಪಿ ಸರ್ಕಾರ ಸತ್ತಿದೆ:
ವಲಸೆ ಕಾರ್ಮಿಕರಿಗೆ ಬಸ್, ರೈಲು ವ್ಯವಸ್ಥೆ ಮಾಡಿಲ್ಲ. ಊಟ ನೀಡಲಿಲ್ಲ. ಉದ್ಯೋಗ ಕೊಡಲಿಲ್ಲ. 6 ಲಕ್ಷಕ್ಕೂ ಹೆಚ್ಚು ಜನ ವಲಸೆ ಹೋಗಿದ್ದಾರೆ. ಹೀಗಾಗಿ ಪ್ರತಿಯೊಬ್ಬ  ವಲಸೆ ಕಾರ್ಮಿಕರಿಗೆ ₹ 10 ಸಾವಿರ ಕೊಡುವಂತೆ ತಿಳಿಸಿದ್ದೆ. ಆದರೆ ನಿರ್ಲಕ್ಷ್ಯ ವಹಿಸಿರುವ ಬಿಜೆಪಿ ಸರ್ಕಾರ ಸತ್ತಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×