ರಾಕಿ ಬಾಯ್ ಯಶ್ ಅಭಿನಯದ ಬಿಗ್ ಬಜೆಟ್ ಚಿತ್ರ ಕೆಜಿಎಫ್ ಚಾಪ್ಟರ್ 1 ಅದ್ಭುತ ಯಶಸ್ಸು ಗಳಿಸಿದ್ದು ಎಲ್ಲರಿಗೆ ಗೊತ್ತಿರುವ ಸಂಗತಿ. ಇದೀಗ ಚಾಪ್ಟರ್ 2 ಸಹ ಬಿಡುಗಡೆಗಾಗಿ ದಿನಗಣನೆ ಪ್ರಾರಂಭಗೊಂಡಿದೆ. ಈ ನಡುವೆ ಕೆಜಿಎಫ್ ಚಿತ್ರವನ್ನು ಅಕ್ರಮವಾಗಿ ಪ್ರಸಾರ ಮಾಡಿದ್ದ ತೆಲುಗು ಟಿವಿ ಚಾನಲ್ ಒಂದರ ವಿರುದ್ಧ ಕಾನೂನು ಹೋರಾಟ ನಡೆಸಲು ಚಿತ್ರತಂಡ ತೀರ್ಮಾನಿಸಿದೆ.
ತೆಲುಗು ವಾಹಿನಿ ಎವರಿ (Every) ಎಂಬ ಸ್ಥಳೀಯ ಚಾನಲ್ ಒಂದರಲ್ಲಿ ಕೆಜಿಎಫ್ ಚಾಪ್ಟರ್ 1 ರ ತೆಲುಗು ಅವತರಣಿಕೆಯನ್ನು ಅಕ್ರಮವಾಗಿ ಪ್ರಸಾರ ಮಾಡಲಾಗಿದೆ.
ಇದೀಗ ಚಾನಲ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿರುವ ಚಿತ್ರ ವಿತರಕ ಕಾರ್ತಿಕ್ ಗೌಡ ತಮ್ಮ ಟ್ವಿಟ್ ಮೂಲಕ ಈ ಮಾಹಿತಿ ಹಂಚಿಕೊಂಡಿದ್ದಾರೆ.”ಕೆಜಿಎಫ್ ಚಿತ್ರದ ಸ್ಯಾಟಲೈಟ್ ಹಕ್ಕುಗಳ ಬಗೆಗಿನ ಮಾತುಕತೆ ಅಂತಿಮ ಹಂತದಲ್ಲಿರುವ ವೇಳೆ ಈ ಘಟನೆ ನಡೆದಿದೆ. ನಾವು ಈ ಕುರಿತು ಕಾನೂನು ಹೋರಾಟ ನಡೆಸಲಿದ್ದೇವೆ. ನಮ್ಮ ಬಳಿ ಟಿವಿ ಚಾನಲ್ ಚಿತ್ರ ಪ್ರಸಾರ ಮಾಡಿದ್ದರ ಬಗೆಗಿನ ಸ್ಕ್ರೀನ್ ಶಾಟ್, ವಿಡಿಯೋ ಸಾಕ್ಷಿಗಳಿದೆ” ಅವರು ಟ್ವೀಟ್ ನಲ್ಲಿ ಹೇಳಿದ್ದಾರೆ.
Follow us on Social media