ಯಾದಗಿರಿ: ಜಿಲ್ಲೆಯಲ್ಲಿ ಲಾಕ್ಡೌನ್ ಮೊದಲ ದಿನವೇ ಪೊಲೀಸರು ಫುಲ್ ಬ್ಯಾಟಿಂಗ್ ಸ್ಟಾರ್ಟ್ ಆಗಿಬಿಟ್ಟಿದೆ. ಮಾಸ್ಕ್ ಇಲ್ಲದೆ ಹೊರಗಡೆ ಬೇಕಾಬಿಟ್ಟಿ ತಿರುಗುತ್ತಿದ್ದವರಿಗೆ ಉಚಿತವಾಗಿ ಬಿಸಿ ಬಿಸಿ ಕಜ್ಜಾಯ ಸೀಗುತ್ತಿದೆ. ಇದರ ಜೊತೆಗೆ ದಂಡ ಕಟ್ಟಬೇಕು ಬೇಕು, ಬಸ್ಕಿ ಹೊಡಿಬೇಕು.
ಕಾನೂನು ಬಾಹಿರವಾಗಿ ಪಾನ್ಶಾಪ್, ಗುಟ್ಕಾ ಮಾರಾಟ ಮಾಡುತ್ತಿದ್ದವರಿಗೂ ಪೊಲೀಸರು ಸಖತ್ ಪಂಚ್ ನೀಡುತ್ತಿದ್ದಾರೆ. ಯಾದಗಿರಿ ನಗರದಲ್ಲಿ ಲಾಕ್ಡೌನ್ ಮೊದಲ ದಿನ ಪೊಲೀಸರು ಫುಲ್ ಬ್ಯಾಟಿಂಗ್ ಶುರು ಮಾಡಿದ್ದರಿಂದ ಪೊಲೀಸರನ್ನು ಕಂಡು ಜನ ಎದ್ನೋ, ಬಿದ್ನೋ ಎಂದು ಓಡಿ ತಮ್ಮ ತಮ್ಮ ಮನೆ ಸೇರಿಕೊಳ್ಳುತ್ತಿದ್ದಾರೆ.
ಇನ್ನೂ ಮಾಸ್ಕ್ ಹಾಕದೆ ತಿರುಗುತ್ತಿದ್ದ ಯುವಕರಿಗೆ ಬಸ್ಕಿ ಹೊಡೆಸುತ್ತಿರುವ ಪೊಲೀಸರು, ಕೊರೊನಾ ಮುನ್ನಜಾಗ್ರತ ಪಾಠ ಮಾಡುತ್ತಿದ್ದಾರೆ.
Follow us on Social media