ಮುಂಬೈ : ಇಲ್ಲಿನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ನಡೆದ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ 2 ರನ್ ಗಳ ರೋಚಕ ಗೆಲುವು ದಾಖಲಿಸಿದಿದೆ.
- ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ 20 ಓವರ್ ಗಳಲ್ಲಿ ಐದು ವಿಕೆಟ್ ಗಳ ನಷ್ಟಕ್ಕೆ 162 ಗಳಿಸಿತು. ಭಾರತ ಪರ ಇಶಾನ್ ಕಿಶಾನ್ 37, ನಾಯಕ ಹಾರ್ದಿಕ್ ಪಾಂಡ್ಯ 29, ದೀಪಕ್ ಹೂಡ 41, ಅಕ್ಷರ್ ಪಾಟೇಲ್ 31 ರನ್ ಗಳಿಸಿದರು.ಇನ್ನು ಭಾರತ ನೀಡಿದ ಗುರಿ ಬೆನ್ನಟ್ಟಿದ್ದ ಲಂಕಾ ಪಡೆಗೆ ಆರಂಭದಲ್ಲೇ ಆಘಾತ ಎದುರಾಯಿತು. ನಿಸ್ಸಾಂಕ ಖಾತೆ ತೆರೆಯದೆ ಮರಳಿದರು. ವಿಕೆಟ್ ಕೀಪರ್ ಕುಶಲ್ ಮೆಂಡಿಸ್ 28, ದಸುನ್ ಶನಾಕ 45, ಕರುಣರತ್ನೆ 23 ರನ್ ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಆಟ ಪ್ರದರ್ಶಿಸಿದ ಲಂಕಾ ಪಡೆಯ ಆಟಗಾರರು ಗೆಲುವಿನ ನಿರೀಕ್ಷೆ ಮೂಡಿಸಿದರು. ಅಕ್ಷರ್ ಪಾಟೇಲ್ ಎಸೆದ ಕೊನೆಯ ಓವರ್ ನಲ್ಲಿ ಎರಡು ವಿಕೆಟ್ ಕಬಳಿಸುವ ಮೂಲಕ ವಿಜಯ ಲಕ್ಷ್ಮೀ ಭಾರತಕ್ಕೆ ಒಲಿಯಿತು. ಭಾರತ ಪರ ಶಿವಂ ಮಾವಿ 4, ಉಮ್ರನ್ ಮಲ್ಲಿಕ್ ಹಾಗೂ ಹರ್ಷಲ್ ಪಾಟೆಲ್ ತಲಾ 2 ವಿಕೆಟ್ ಪಡೆದರು.