ಮೈಸೂರು: ಸತಿ-ಪತಿಗಳಾಗಿ ಬಾಳಿ ಬದುಕಬೇಕಿದ್ದ ನವ ಜೋಡಿಯೊಂದು ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಲು ಹೋಗಿ ದುರಂತ ಅಂತ್ಯ ಕಂಡಿದ್ದಾರೆ.
ನವ ಜೋಡಿ ಮೈಸೂರಿನ ತಲಕಾಡಿನಲ್ಲಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಲು ಮುಂದಾಗಿದ್ದು ತಲಕಾಡಿನ ಮುಡುಕುತೊರೆ ಗ್ರಾಮದಲ್ಲಿ ಹರಿಯುವ ಕಾವೇರಿ ನದಿಯಲ್ಲಿ ತೆಪ್ಪದಲ್ಲಿ ಫೋಟೋಶೂಟ್ ಮಾಡಿಸಲು ಮುಂದಾಗಿತ್ತು. ಆದರೆ ತೆಪ್ಪ ಮುಳುಗಿ ನವ ಜೋಡಿ ದುರಂತ ಸಾವು ಕಂಡಿದ್ದಾರೆ.
ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಗಳಾದ ಚಂದ್ರು ಮತ್ತು ಶಶಿಕಲಾ ಮೃತ ದುರ್ದೈವಿಗಳು. ಇವರ ಮದುವೆ ನವೆಂಬರ್ 22ಕ್ಕೆ ನಿಶ್ಚಯವಾಗಿತ್ತು. ಆದರೆ ಮದುವೆಗೂ ಮುನ್ನವೇ ನವ ಜೋಡಿ ಜಲಸಮಾಧಿಯಾಗಿದ್ದಾರೆ.
ಘಟನೆ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರ ಶವಗಳನ್ನು ಹೊರಕ್ಕೆ ತೆಗೆದಿದ್ದಾರೆ. ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on Social media