Breaking News

ಮೆಡಿಕಲ್ ಶಾಪ್ ಖಾಲಿ – ಮದ್ಯದಂಗಡಿ ಫುಲ್

ಹುಬ್ಬಳ್ಳಿ : ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಇದೂವರೆಗೂ ಮದ್ಯ ಮಾರಾಟವನ್ನ ಸ್ಥಗಿತಗೊಳಿಸಲಾಗಿತ್ತು. ಆದರೆ ಇಂದು ಲಾಕ್‍ಡೌನ್ ಸಡಿಲಿಕೆ ಮಾಡಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿದ ಪರಿಣಾಮ ಮದ್ಯ ಪ್ರಿಯರು ಬೆಳಗ್ಗೆಯಿಂದ ಮದ್ಯ ಖರೀದಿ ಮಾಡಲು ಕ್ಯೂ ನಿಂತಿದ್ದಾರೆ. ಆದರೆ ಪಕ್ಕದಲ್ಲಿದ್ದ ಮೆಡಿಕಲ್ ಶಾಪ್ ಮಾತ್ರ ಖಾಲಿಯಾಗಿದೆ.

ಮದ್ಯ ಮಾರಾಟ ಆರಂಭವಾಗುತ್ತಿದ್ದಂತೆ ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣ ಬಳಿಯ ದಾರುವಾಲ್ ಶಾಪ್ ಮುಂದೆ ಎಣ್ಣೆ ಖರೀದಿ ಮಾಡಲು ಸುಮಾರು ಒಂದು ಕೀಲೋ ಮೀಟರ್‌ವರೆಗೂ ಕ್ಯೂನಲ್ಲಿ ಜನರು ನಿಂತಿದ್ದಾರೆ. ಮಧ್ಯಾಹ್ನವಾದರೂ ಕ್ಯೂ ಮಾತ್ರ ಕಡಿಮೆಯಾಗಿಲ್ಲ. ಬಿಸಿಲಿನ ತಾಪಮಾನ ಕ್ಷಣದಿಂದ ಕ್ಷಣಕ್ಕೆ ಏರಿಕೆಯಾಗುತ್ತಿದ್ದರೂ ಮದ್ಯಪ್ರಿಯರು ಮಾತ್ರ ಯಾವುದೇ ಬಿಸಿಲನ್ನು ಲೆಕ್ಕಿಸದೆ ಸರದಿ ಸಾಲಿನಲ್ಲಿ ನಿಂತಿದ್ದಾರೆ.

ಇನ್ನೂ ಮದ್ಯದ ಅಂಗಡಿ ಪಕ್ಕದಲ್ಲಿರುವ ಮೆಡಿಕಲ್ ಶಾಪ್ ಮುಂದೆ ಯಾವುದೇ ಗ್ರಾಹಕರು ಇಲ್ಲದೇ ಬಿಕೋ ಎನ್ನುತ್ತಿದೆ. ಇದರ ಪಕ್ಕದಲ್ಲೇ ಇರುವ ಮದ್ಯ ಅಂಗಡಿಯಲ್ಲಿ ಮಾತ್ರ ಗ್ರಾಹಕರನ್ನು ನಿಯಂತ್ರಣ ಮಾಡಲು ಪೊಲೀಸರು ಹಾಗೂ ಅಂಗಡಿಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಜನರ ಪ್ರಮಾಣ ಪ್ರತಿ ಗಂಟೆಗೂ ಹೆಚ್ಚಾಗುತ್ತಿದ್ದು, ಮದ್ಯ ಖರೀದಿಗೆ ಕಿಕ್ಕಿರಿದು ಸೇರುತ್ತಿರುವ ಜನರನ್ನು ನೋಡಿ ಕರ್ತವ್ಯನಿರತ ಪೊಲೀಸರು ಕಂಗಾಲಾಗಿದ್ದಾರೆ.

Follow us on Social media

About the author

×