ಮೈಸೂರು: ಕೇಂದ್ರದಿಂದ ಬರಬೇಕಾದ ಹಣ ತರಲು ಸಿಎಂ ಗೆ ಸಾಧ್ಯವಾಗುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಹೇಳಿದ ರೀತಿಯಲ್ಲಿ ಇವರು ಡ್ಯಾನ್ಸ್ ಮಾಡುತ್ತಾರೆ. ಯಡಿಯೂರಪ್ಪನವರಿಗೆ ಧಮ್ ಇದ್ದಿದ್ದರೆ ನಮಗೆ ಬರಬೇಕಾದ ಹಣ ಬರುತ್ತಿತ್ತು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಧಾನಿ ಮೋದಿಯ ತಮ್ಮ ತಾಳಕ್ಕೆ ಯಡಿಯೂರಪ್ಪ ಒಬ್ಬರನ್ನೇ ಕುಣಿಸುತ್ತಿಲ್ಲ. ಇಡೀ ದೇಶದ ಜನರನ್ನು ಕುಣಿಸುತ್ತಿದ್ದಾರೆ. ಕೊರೊನಾ ನಿಯಂತ್ರಣ ಮಾಡಲಾಗಲಿಲ್ಲ. ಬರೀ ಜಾಗಟೆ, ಚಪ್ಪಾಳೆ, ದೀಪ ಹಚ್ಚುವಂತೆ ಮಾಡಿದ್ದು ಬಿಟ್ಟರೆ ಬೇರೇನೂ ಮಾಡಲಿಲ್ಲ. ಕೇಂದ್ರ ಸರಕಾರ ಹೇಳುವುದಕ್ಕೆ ಸಿಎಂ ಯಡಿಯೂರಪ್ಪ ತಲೆಯಾಡಿಸುತ್ತಾರೆ. ಪ್ರಧಾನಿ ಮೋದಿ ಮುಂದೆ ಮಾತನಾಡಲು ಯಡಿಯೂರಪ್ಪಗೆ ಧಮ್ ಇಲ್ಲ. 15ನೇ ಹಣಕಾಸು ಆಯೋಗ ಶಿಫಾರಸ್ಸು ಮಾಡಿದ್ದ 5,049
ಕೋಟಿ ರೂ. ಬಿಡುಗಡೆ ಮಾಡದೆ ಇದ್ದರೂ ಈತನಕ ಕೇಳಿಲ್ಲ ಎಂದು ಆರೋಪಿಸಿದ್ದಾರೆ..
ಜಿಎಸ್‌ಟಿ ಹಣ ಸೇರಿದಂತೆ 15ನೇ ಹಣಕಾಸು ಆಯೋಗದಡಿ ರಾಜ್ಯಕ್ಕೆ ಬರಬೇಕಾಗಿದ್ದ ಅನುದಾನವನ್ನು ಕೇಳುವುದಕ್ಕೂ ಅವರಿಗೆ ಆಗುತ್ತಿಲ್ಲ ಎಂದು ಹರಿಹಾಯ್ದ ಅವರು, ‘ಮೋದಿತಾಳಕ್ಕೆ ಯಡಿಯೂರಪ್ಪ ಒಬ್ಬರೇ ಅಲ್ಲ, ದೇಶದ ಬಹುತೇಕರು ಕುಣಿಯುತ್ತಿ ದ್ದಾರೆ’ ಎಂದು ಟೀಕಿಸಿದರು. ‘ಎಪಿಎಂಸಿ, ಕಾರ್ಮಿಕ, ಭೂ ಸುಧಾರಣೆ ಕಾಯ್ದೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಬೇಕು. ಆದರೆ, ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಈ ತಿದ್ದುಪಡಿ ಮಸೂದೆಗಳನ್ನು ಜಾರಿಗೊಳಿ ಸುತ್ತಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ. ಇದರ ವಿರುದ್ಧ ರಾಜಕೀಯ ಹೋರಾಟ ನಿಲ್ಲದು’ ಎಂದರು.
Follow us on Social media