ಬೆಂಗಳೂರು: ಮಾನವ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಸವರಾಜು ಶಂಕರಪ್ಪ ಕಳಸದ್ ಬಂಧಿತ ಆರೋಪಿ.
ಬಂಧಿತ ಕೆಲಸದ ಆಮಿಷದ ನೆಪವೊಡ್ಡಿ, ನಂಬಿಸಿ ಅನ್ಯರಾಜ್ಯಗಳ ಯುವತಿಯರನ್ನು ಕರೆತಂದು ನಂತರ ಯುವತಿಯರನ್ನು ಡಾನ್ಸ್ ಬಾರ್ಗಳಿಗೆ ಸರಬರಾಜು ಮಾಡುತ್ತಿದ್ದನು. ಯುಎಇ, ಫ್ಯುಜಾರಿಯಾಗಳಿಗೆ ಅಕ್ರಮ ಸಾಗಾಣಿಕೆ ಮಾಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಆರೋಪಿ ಬಸವರಾಜು ತಾನು ಪರಭಾಷೆಗಳ ಚಲನಚಿತ್ರಗಳಲ್ಲಿ ಸೈಡ್ ಆ್ಯಕ್ಟಿಂಗ್, ಪ್ರೊಡೆಕ್ಷನ್, ಕ್ಯಾಮರಾ ಕೆಲಸ ನಿರ್ವಹಿಸಿದ್ದನೆನ್ನಲಾಗಿದೆ. ಪ್ರಸಿದ್ದ ನಾಯಕ ನಟರ ಜತೆಗೆ ಫೋಟೋ ತೆಗೆಸಿಕೊಳ್ಳುವ ಚಾಳಿ ಈತನಿಗಿದ್ದು ಅದೇ ಫೋಟೋಗಳನ್ನು ಯುವತಿಯರು, ಮಹಿಳೆಯರಿಗೆ ತೋರಿಸಿ ವಂಚನೆಯ ಬಲೆಗೆ ಬೀಳಿಸಿದ್ದ.
ಇದೀಗ ಆರೋಪಿ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಿಚಾರಣೆ ತೀವ್ರಗೊಂಡಿದೆ.
Follow us on Social media