ಮುಂಬೈ: ನಿನ್ನೆ ಆತ್ಮಹತ್ಯೆಗೆ ಶರಣಾಗಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಂತ್ಯಕ್ರಿಯೆ ಇಂದು ಮುಂಬೈನಲ್ಲಿ ನೆರವೇರಿತು.
ಮುಂಬೈನ ಪವನ್ ಹ್ಯಾನ್ಸ್ ಚಿತಾಗಾರದಲ್ಲಿ ಇಂದು ಸಂಜೆ ಸುಶಾಂತ್ ಸಿಂಗ್ ರಜಪೂತ್ ಅವರ ಅಂತ್ಯಕ್ರಿಯೆ ನಡೆಯಿತು. ಸುಶಾಂತ್ ಸಿಂಗ್ ತಂದೆ ಮತ್ತು ಇಬ್ಬರು ಸಹೋದರಿಯರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಅಂತ್ಯಕ್ರಿಯೆ ವೇಳೆ ಕುಟುಂಬದವರು, ಸ್ನೇಹಿತರು ಮತ್ತು ಬಾಲಿವುಡ್ ನ ಕೆಲವೇ ಕೆಲವು ಗಣ್ಯರು ಮಾತ್ರ ಬಾಗಿಯಾಗಿ ಅಂತಿಮ ವಿದಾಯ ಹೇಳಿದರು.
ಅಂತ್ಯಕ್ರಿಯೆ ವೇಳೆ ಮುಂಬೈನಲ್ಲಿ ಭಾರಿ ಮಳೆ ಸುರಿಯುತ್ತಿತ್ತು. ಮಳೆಯನ್ನು ಲೆಕ್ಕಿಸದೆ ಬಾಲಿವುಡ್ ಗಣ್ಯರು ಸುಶಾಂತ್ ಸಿಂಗ್ ಅಂತಿಮ ದರ್ಶನ ಪಡೆದರು. ಸುಶಾಂತ್ ಜೊತೆ ಅಭಿನಯಿಸಿದ್ದ, ನಟಿ ಕೃತಿ ಸನೂನ್, ಶ್ರದ್ಧಾ ಕಪೂರ್, ವರುಣ್ ಶರ್ಮಾ, ನಟ ವಿವೇಕ್ ಒಬೆರಾಯ್, ವರುಣ್ ಶರ್ಮಾ, ಅಭಿಷೇಕ್ ಕಪೂರ್ ಮತ್ತು ಸುಶಾಂತ್ ಸಿಂಗ್ ಅವರ ಗೆಳತಿ ಎನ್ನಲಾಗುತ್ತಿರುವ ರಿಯಾ ಚಕ್ರವರ್ತಿ ಹಾಜರಿದ್ದರು.
ಸುಶಾಂತ್ ಸಿಂಗ್ ಜೂನ್ 14 ಭಾನುವಾರ ಮುಂಬೈನ ಬಾಂದ್ರಾ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ನಿನ್ನೆ ನಿಧನರಾಗಿದ್ದ ಸುಶಾಂತ್ ಸಿಂಗ್ ಅವರ ಮೃತ ದೇಹವನ್ನು ಮುಂಬೈನ ಕೂಪರ್ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ನಿನ್ನ ರಾತ್ರಿ ಮರಣೋತ್ತರ ಪರೀಕ್ಷೆ ನಂತರ, ಸುಶಾಂತ್ ನೇಣು ಬಿಗಿದುಕೊಂಡು ಸಾವನ್ನಪ್ದಿರುವುದಾಗಿ ದೃಢಪಡಿಸಿದ್ದಾರೆ.
Follow us on Social media