ಮೈಸೂರು : ಮದ್ಯದ ಅಮಲಿನಲ್ಲಿ ತೇಲುತ್ತಿದ್ದ ಗೆಳೆಯರು ತನ್ನ ಸ್ನೇಹಿತನನ್ನೇ ಇರಿದು ಕೊಲೆ ಮಾಡಿರುವ ಘಟನೆ ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ನಡೆದಿದೆ.
ಇಲ್ಲಿನ ದಲಿತ ಕಾಲೋನಿಯ ಸತೀಶ್ (24)ಕೊಲೆಯಾದ ಯುವಕ. ನಿನ್ನೆ ಬೆಳಗ್ಗೆ ಗೆಳೆಯರ ಜೊತೆ ತೆರಳಿದ್ದ ಸತೀಶ್ ಬಿಯರ್ ಬಾಟಲಿಗಳನ್ನ ಖರೀದಿಸಿದ್ದಾರೆ.ಸಂಜೆ ಊರಿನ ಹೊರವಲಯದಲ್ಲಿ ಕಂಠ ಪೂರ್ತಿ ಕುಡಿದಿದ್ದಾರೆ. ಈ ವೇಳೆ ಸತೀಶನ ಪ್ರೇಯಸಿಯ ವಿಚಾರಕ್ಕೆ ಮಾತಿನ ಚಕಮಕಿ ಶುರುವಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು
ಸ್ನೇಹಿತನಿಗೆ ಚಾಕುವುನಿಂದ ಗೆಳೆಯರು ಇರಿದಿದ್ದಾರೆ. ಅಮಲು ಇಳಿದ ಸತೀಶ್
ಸಾಕಷ್ಟು ಬೇಡಿಕೊಂಡರು ಸ್ನೇಹಿತನನ್ನು ಸ್ಥಳದಲ್ಲೆ ಬಿಟ್ಟು ಪರಾರಿಯಾದ್ದಾರೆ. ತೀವ್ರ ರಕ್ತಸ್ರಾವದಿಂದ ಸತೀಶ್ ಸ್ಥಳದಲ್ಲೆ ಪ್ರಾಣಬಿಟ್ಟಿದ್ದಾನೆ. ಸದ್ಯ,
ಸ್ಥಳಕ್ಕ ಉದಯಗಿರಿ ಠಾಣೆ ಪೋಲಿಸರು ದೌಡಾಯಿಸಿದ್ದು, ತನಿಖೆ ನಡೆಸುತ್ತಿದ್ದಾರೆ