ಬೆಳ್ತಂಗಡಿ: ಚಾರ್ಮಾಡಿ ಘಾಟ್ ರಸ್ತೆಯ 3, 4, 7 ನೇ ತಿರುವಿನಲ್ಲಿ ಗುಡ್ಡ ಕುಸಿಯುತ್ತಿದ್ದು, ಮರಗಳು ಕೂಡಾ ಧರಾಶಾಯಿಯಾಗಿವೆ. ಮೂರನೇ ತಿರುವಿನಲ್ಲಿ ದೊಡ್ಡ ಬಂಡೆ ಕುಸಿಯುವ ಹಂತದಲ್ಲಿದ್ದು, ಸವಾರರು ಭೀತಿಗೊಳಗಾಗಿದ್ದಾರೆ. ನೀರು ಹರಿಯಲು ಜಿಸಿಬಿಯಿಂದ ಮಣ್ಣು ತೆರವು ಕಾರ್ಯ ಭರದಿಂದ ಸಾಗಿದೆ.
ಅರಣ್ಯ ಇಲಾಖೆ ಸಿಬಂದಿ, 5 ಮಂದಿ ಪ್ರಕೃತಿ ವಿಕೋಪ ರಕ್ಷಣಾ ತಂಡ, ಬೆಳ್ತಂಗಡಿ, ಧರ್ಮಸ್ಥಳ ಠಾಣೆ ಪೊಲೀಸ್ ಸಿಬಂದಿ, ಆರೋಗ್ಯ, ಮೆಸ್ಕಾಂ ಇಲಾಖೆ ಸಿಬಂದಿ ಸ್ಥಳದಲ್ಲಿ ಮೆಕ್ಕಾಂ ಹೂಡಿದ್ದಾರೆ.
ನೇತ್ರಾವತಿ ನದಿಯು ಮೈದುಂಬಿ ಹರಿಯುತ್ತಿದ್ದು, ಧರ್ಮಸ್ಥಳ ಸ್ನಾನಘಟ್ಟದಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.