ಮಡಿಕೇರಿ : ಟ್ವೀಟರ್ನಲ್ಲಿ ಸಿದ್ದರಾಮಯ್ಯ ಯಾವಾಗಲೂ ಭೇದಿ ಮಾಡಿಕೊಳ್ಳುತ್ತಲೇ ಇರುತ್ತಾರೆ. ಅದು ಅವರಿಗೆ ರೂಢಿಯಾಗಿದೆ. ಆ ಭೇದಿಯ ಗಬ್ಬು ವಾಸನೆಗೆ ನಾನು ಪ್ರತಿಕ್ರಿಯಿಸಲಾರೆ ಎಂದು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ಆರೆಸ್ಸೆಸ್ ಬ್ರಿಟೀಷರಿಗೆ ಸಹಾಯ ಮಾಡಿತ್ತು’ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಕುರಿತು ಪ್ರತಿಕ್ರಿಯಿಸಿದ ಅವರು, ಆಧಾರರಹಿತವಾಗಿಯೇ ಟ್ವೀಟ್ ಮಾಡಿ ತಪ್ಪು ಮಾಹಿತಿ ನೀಡುವ ಸಿದ್ದರಾಮಯ್ಯ ಕ್ರಮ ಸರಿಯಲ್ಲ ಎಂದರು.ಬಿಜೆಪಿ ಸರ್ಕಾರದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಕಾಂಗ್ರೆಸ್ನವರಿಗೆ ಇಲ್ಲ. ಗುಜರಾತ್ ಹಿಂಸಾಚಾರ ಪ್ರಕರಣದಲ್ಲಿ ಎಸ್ಐಟಿ ನಾಲ್ಕೈದು ಬಾರಿ ವಿಚಾರಣೆ ನಡೆಸಿದೆ. ಅಮಿತ್ ಶಾರನ್ನು ಕೊಲೆ ಪ್ರಕರಣದಲ್ಲಿ ಸಿಲುಕಿಸಿ ಅನ್ಯಾಯವಾಗಿ ಜೈಲಿಗೆ ಕಳುಹಿಸಲಾಗಿತ್ತು. ಆಗೆಲ್ಲ ಎಸ್ಐಟಿಯನ್ನು ಕಾಂಗ್ರೆಸ್ ದುರ್ಬಳಕೆ ಮಾಡಿಕೊಂಡಿದೆ ಎಂದು ನಾವೇನಾದರೂ ಹೇಳಿದ್ದೇವಾ? ಎಂದು ಪ್ರಶ್ನಿಸಿದ ಅವರು, ಪ್ರಸ್ತುತ ಇಡಿಯು ರಾಹುಲ್ ಗಾಂಧಿಯವರನ್ನು ವಿಚಾರಣೆಗೆ ಹಾಜರಾಗಲು ಹೇಳುವಾಗಿ ಕಾಂಗ್ರೆಸ್ನವರು ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ ಭ್ರಷ್ಟಾಚಾರದ ಆರೋಪವಿರುವುದರಿಂದ ಅವರ ತನಿಖೆ ನಡೆಯುತ್ತಿದೆ ಎಂದರು.
ಸದ್ಯ ಕರ್ನಾಟಕವೊಂದೇ ಕಾಂಗ್ರೆಸ್ಗೆ ಉಳಿದಿರುವುದು. ಆದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನ ಅವರನ್ನು ಇಲ್ಲಿಂದಲೂ ಕಿತ್ತೆಸೆಯುವುದು ನಿಶ್ಚಿತ ಎಂದವರು ಇದೇ ವೇಳೆ ತಿಳಿಸಿದರು.
Follow us on Social media