ಮೊದಲಿಗೆ ಬ್ಯಾಟಿಂಗ್ ನಡೆಸಿದ ಐರ್ಲೆಂಡ್ ತಂಡ ನಿಗದಿತ 12 ಓವರ್ಗಳಲ್ಲಿ 108 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿತು. ಐರ್ಲೆಂಡ್ ತಂಡದ ಪರವಾಗಿ ಹ್ಯಾರಿ ಟೆಕ್ಟರ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. 33 ಎಸೆತಗಳನ್ನು ಎದುರಿಸಿದ ಟೆಕ್ಟರ್ 64 ರನ್ಗಳಿಸಿದ್ದಾರೆ. ಈ ಇನ್ನಿಂಗ್ಸ್ನಲ್ಲಿ ಅವರಿಂದ ಆರು ಬೌಂಡರಿ ಹಾಗೂ ಮೂರು ಸಿಕ್ಸರ್ ಸಿಡಿದಿತ್ತು. ಉಳಿದಂತೆ ಡಕ್ಕರ್ ಕೆಲ ಕಾಲ ಅವರಿಗೆ ಉತ್ತಮವಾಗಿ ಸಾಥ್ ನೀಡಿ 18 ರನ್ಗಳ ಕೊಡುಗೆ ನೀಡಿದರು.
ಭಾರತದ ಪರವಾಗಿ ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ ಹಾಗೂ ಆವೇಶ್ ಖಾನ್ ಮತ್ತು ಚಾಹಲ್ ತಲಾ ಒಂದು ವಿಕೆಟ್ ಪಡೆದರು. ಭಾರತ ಐರ್ಲೆಂಡ್ ತಮಡದ ಮೂರು ವಿಕೆಟ್ಗಳನ್ನು ಪವರ್ಪ್ಲೇನಲ್ಲಿಯೇ ಪಡೆದುಕೊಂಡಿತು ಎಂಬುದು ವಿಶೇಷ. ಇನ್ನು ಈ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಇಶಾನ್ ಕಿಶನ್ ಜೊತೆಗೆ ಮೊದಲ ಬಾರಿಗೆ ಆರಂಭಿಕನಾಗಿ ಕಣಕ್ಕಿಳಿದ ದೀಪಕ್ ಹೂಡಾ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಇಶಾನ್ ಕಿಶನ್ 11 ಎಸೆತಗಳಲ್ಲಿ 26 ರನ್ ಸಿಡಿಸಿ ಕ್ರೇಗ್ ಯಂಗ್ಗೆ ಬೌಲ್ಡ್ ಆದರು. ಬಳಿಕ ಬಂದ ಸೂರ್ಯಕುಮಾರ್ ಯಾದವ್ ಒಂದೇ ಎಸೆತಕ್ಕೆ ಶೂನ್ಯ ಸುತ್ತಿ ಫೆವಿಲಿಯನ್ ಸೇರಿಕೊಂಡರು. ನಂತರ ಬ್ಯಾಟಿಂಗ್ಗೆ ಇಳಿದ ನಾಯಕ ಹಾರ್ದಿಕ್ ಪಾಂಡ್ಯ 12 ಎಸೆತಗಳಲ್ಲಿ 24 ರನ್ಗಳ ಕೊಡುಗೆ ನೀಡಿ ವಿಕೆಟ್ ಕಳೆದುಕೊಂಡರು. ಇನ್ನು ಆರಂಭಿಕನಾಗಿ ಕಣಕ್ಕಿಳಿದ ದೀಪಕ್ ಹೂಡಾ ಅಂತಿಮ ಹಂತದವರೆಗೂ ಅಜೇಯವಾಗುಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು. 29 ಎಸೆತ ಎದುರಿಸಿದ ಹೂಡಾ 47 ರನ್ಗಳಿಸಿದ್ದಾರೆ. ದಿನೇಶ್ ಕಾರ್ತಿಕ್ 5 ರನ್ಗಳಿಸಿದ್ದಾರೆ. ಈ ಮೂಲಕ ಭಾರತ ಇನ್ನೂ 16 ಎಸೆತಗಳು ಬಾಕಿಯಿರುವಂತೆಯೇ ಭರ್ಜರಿಯಾಗಿ ಗೆಲುವು ಸಾಧಿಸಿದೆ.
Read more at: https://kannada.mykhel.com/cricket/india-vs-ireland-1st-t20i-india-won-by-7-wickets-against-ireland-025556.html?story=4

Follow us on Social media