ನವದೆಹಲಿ: ಮುಂಬರುವ ಟಿ20 ವಿಶ್ವಕಪ್‌ಗೆ ಮುನ್ನ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾನುವಾರ ಭಾರತ ತಂಡದ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ.
ಒಂದು ತಿಂಗಳ ಅವಧಿಯಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಬಿಸಿಸಿಐ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್‌ನಲ್ಲಿ ಹೊಸ ಜೆರ್ಸಿ ಕಿಟ್ ಅನ್ನು ಬಿಡುಗಡೆ ಮಾಡಿದೆ.
ಫೋಟೋದಲ್ಲಿ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಮತ್ತು ಮಹಿಳಾ ತಂಡದ ಹರ್ಮನ್‌ಪ್ರೀತ್ ಕೌರ್, ಶೆಫಾಲಿ ವರ್ಮಾ ಮತ್ತು ರೇಣುಕಾ ಸಿಂಗ್ ಹೊಸ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಹೊಸ ಜೆರ್ಸಿಯು ಡ್ಯುಯಲ್ ಟೋನ್ ಆಗಿದ್ದು, ಭುಜಗಳು ಮತ್ತು ತೋಳುಗಳಲ್ಲಿ ಗಾಢ ನೀಲಿ ಮತ್ತು ಬೇರೆಡೆ ತಿಳಿ ನೀಲಿ ಛಾಯೆಯಲ್ಲಿರುತ್ತದೆ. ಜೆರ್ಸಿಯ ಎಡಭಾಗದಲ್ಲಿ ಸಣ್ಣ ವಿನ್ಯಾಸವಿದೆ. ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಟ್ವೀಟ್‌ನಲ್ಲಿ, ದೇಶದ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳಿಗೆ ಹೊಸ ಜೆರ್ಸಿ ಅನ್ನು ಸಮರ್ಪಿಸಲಾಗಿದೆ ಎಂದು ಬಿಸಿಸಿಐ ಹೇಳಿದೆ.
Follow us on Social media