ಮುಂಬೈ: ಭಾರತೀಯ ನೌಕಾಪಡೆಗೂ ಕೊರೋನಾ ವೈರಸ್ ತಟ್ಟಿದ್ದು, ಮುಂಬೈನಲ್ಲಿ 20 ಮಂದಿ ಸಿಬ್ಬಂದಿಗಳಲ್ಲಿ ಸೋಂಕು ಪತ್ತೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಭಾರತೀಯ ನೌಕಾಪಡೆಯ 20 ಸೇಲರ್’ಗಳು ಸೇರಿ ಒಟ್ಟು 21 ಮಂದಿ ಸಿಬ್ಬಂದಿಗೆಯಲ್ಲಿ ವೈರಸ್ ದೃಢುಪಟ್ಟಿದ್ದು, ಮುಂಬೈನ ನೌಕಾಪಡೆ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನೌಕಾಪಡೆಯಲ್ಲಿ ವೈರಸ್ ಪತ್ತೆಯಾಗಿರುವುದು ಇದೇ ಮೊದಲಾಗಿದ್ದು, ಇದೀಗ ಸೋಂಕು ಪತ್ತೆಯಾಗಿರುವ ಸಿಬ್ಬಂದಿಗಳೊಂದಿಗೆ ಸಂಪರ್ಕ ಹೊಂದಿದ್ದವರಿಗಾಗಿ ಕಾರ್ಯಾಚರಣೆ ಆರಂಭವಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಪ್ರಸ್ತುತ ಸೋಂಕು ಪತ್ತಯಾಗಿರುವ ಸೇಲರ್’ಗಳು ಐಎನ್ಎಸ್ ಆಂಗ್ರೆಯಲ್ಲಿ ನೀಡಲಾಗಿದ್ದ ವಸತಿಗಳಲ್ಲಿ ಇದ್ದರು. ಸರಕು ಸಾಗಣೆ ಮತ್ತು ಆಡಳಿತ ವ್ಯವಹಾರಗಳಲ್ಲಿನ ನೌಕಾ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಪಶ್ಚಿಮ ನೌಕಾಪಡೆ ಕಮಾಂಡ್’ಗೆ ಐಎನ್ಎಸ್ ಆಂಗ್ರೆ ಸಹಕಾರಿಯಾಗಿದೆ.
ಅಗತ್ಯ ಕರ್ತವ್ಯಗಳಿಗಾಗಿ ನೌಕಾಪಡೆ ವಲಯಗಳಲ್ಲಿ ಸಿಬ್ಬಂದಿ ಸಂಚರಿಸಿದ ಪರಿಣಾಮ ಸೋಂಕು ಹರಡಿರುವ ಸಾಧ್ಯತೆಗಳಿವೆ. ನೌಕಾಪಡೆ ಹಗಡುಕಟ್ಟೆಯಲ್ಲಿರುವ ಐಎನ್ಆಸ್ ಆಂಗ್ರೆಯಿಂದ ಕೆಲವು 100 ಮೀಟರ್’ಗಳ ಅಂತರದಲ್ಲಿ ಯುದ್ಧ ನೌಕೆಗಳು ಹಾಗೂ ಜಲಾಂತರ್ಗಾಮಿ ನೌಕೆಗಳಿವೆ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಸೋಂಕಿಗೊಳಗಾಗಿರುವ ಸೇಲರ್ ಗಳು ಐಎನ್’ಹೆಚ್ಎಸ್ ಅಶ್ವಿನಿ, ನೌಕಾಪಡೆ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಆಗಿದ್ದಾರೆ. ಮಹಾರಾಷ್ಟ್ರ ರಾಜ್ಯ ದೇಶದಲ್ಲಿಯೇ ಅತೀ ಹೆಚ್ಚು ವೈರಸ್ ಪತ್ತೆಯಾಗಿರುವ ರಾಜ್ಯವಾಗಿದೆ. ಈ ರಾಜ್ಯದಲ್ಲಿ ಒಟ್ಟು 3,205 ಪ್ರಕರಣಗಳು ಪತ್ತೆಯಾಗಿದೆ.
Follow us on Social media