ಬೆಂಗಳೂರು : ಲಾಕ್‍ಡೌನ್ ಅನ್ನು ತಾತ್ಕಾಲಿಕವಾಗಿ ಕೃಷಿ ಕ್ಷೇತ್ರಕ್ಕೆ ಸಡಿಲಗೊಳಿಸಿದ್ದು, ರೈತರು ತಾವು ಬೆಳೆದ ಭತ್ತ, ರಾಗಿ ಮತ್ತು ಬಿಳಿ ಜೋಳ (ಹೈಬ್ರಿಡ್ ಜೋಳ) ವನ್ನು ತಮ್ಮ ಹತ್ತಿರದ ಖರೀದಿ ಕೇಂದ್ರಗಳಲ್ಲಿ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಭತ್ತಕ್ಕೆ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ನಿಗದಿಪಡಿಸಿದ ಗರಿಷ್ಠ ಮಿತಿಯನ್ನು 2.00 ಲಕ್ಷ ಟನ್ ಭತ್ತ ಖರೀದಿಸಲು ಅನುಮತಿ ನೀಡಿದ್ದು, ಇದೇ 21ರವರೆಗೆ ಕೇವಲ 51,000 ಟನ್ ಭತ್ತ ಮಾತ್ರ ಖರೀದಿಸಲಾಗಿದೆ. ಮೇ 1 ವರೆಗೆ ರೈತರು ನೊಂದಾಯಿಸಿಕೊಳ್ಳಲು ಕಾಲಾವಕಾಶ ವಿಸ್ತರಿಸಲಾಗಿದ್ದು, ಮೇ 15 ರವರೆಗೆ ರೈತರಿಂದ ಭತ್ತ ಖರೀದಿಸುವುದಾಗಿ ತಿಳಿಸಿದೆ.
ಗುಣಮಟ್ಟದ ಗ್ರೇಡ್ ಎ ಭತ್ತಕ್ಕೆ ಪ್ರತಿ ಕ್ವಿಂಟಾಲ್‍ಗೆ ರೂ.1835 ಹಾಗೂ ಸಾಮಾನ್ಯ ಪ್ರಭೇದದ ಭತ್ತಕ್ಕೆ ಪ್ರತಿ ಕ್ವಿಂಟಾಲ್ ಗೆ ರೂ.1815 ಬೆಂಬಲ ಬೆಲೆ ನಿಗದಿಪಡಿಸಿದೆ.ಬೆಂಗಳೂರು, ಏ 24 [ಯುಎನ್ಐ] ಲಾಕ್‍ಡೌನ್ ಅನ್ನು ತಾತ್ಕಾಲಿಕವಾಗಿ ಕೃಷಿ ಕ್ಷೇತ್ರಕ್ಕೆ ಸಡಿಲಗೊಳಿಸಿದ್ದು, ರೈತರು ತಾವು ಬೆಳೆದ ಭತ್ತ, ರಾಗಿ ಮತ್ತು ಬಿಳಿ ಜೋಳ (ಹೈಬ್ರಿಡ್ ಜೋಳ) ವನ್ನು ತಮ್ಮ ಹತ್ತಿರದ ಖರೀದಿ ಕೇಂದ್ರಗಳಲ್ಲಿ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಭತ್ತಕ್ಕೆ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ನಿಗದಿಪಡಿಸಿದ ಗರಿಷ್ಠ ಮಿತಿಯನ್ನು 2.00 ಲಕ್ಷ ಟನ್ ಭತ್ತ ಖರೀದಿಸಲು ಅನುಮತಿ ನೀಡಿದ್ದು, ಇದೇ 21ರವರೆಗೆ ಕೇವಲ 51,000 ಟನ್ ಭತ್ತ ಮಾತ್ರ ಖರೀದಿಸಲಾಗಿದೆ. ಮೇ 1 ವರೆಗೆ ರೈತರು ನೊಂದಾಯಿಸಿಕೊಳ್ಳಲು ಕಾಲಾವಕಾಶ ವಿಸ್ತರಿಸಲಾಗಿದ್ದು, ಮೇ 15 ರವರೆಗೆ ರೈತರಿಂದ ಭತ್ತ ಖರೀದಿಸುವುದಾಗಿ ತಿಳಿಸಿದೆ.
ಗುಣಮಟ್ಟದ ಗ್ರೇಡ್ ಎ ಭತ್ತಕ್ಕೆ ಪ್ರತಿ ಕ್ವಿಂಟಾಲ್‍ಗೆ ರೂ.1835 ಹಾಗೂ ಸಾಮಾನ್ಯ ಪ್ರಭೇದದ ಭತ್ತಕ್ಕೆ ಪ್ರತಿ ಕ್ವಿಂಟಾಲ್ ಗೆ ರೂ.1815 ಬೆಂಬಲ ಬೆಲೆ ನಿಗದಿಪಡಿಸಿದೆ.