ಬೆಂಗಳೂರು: ಬೆಂಗಳೂರು ನಗರದ ಫ್ಲೈಓವರ್ನಲ್ಲಿ ಬೈಕ್ ಸವಾರನೊಬ್ಬ ಗಂಟೆಗೆ ಸುಮಾರು 300 ಕಿ.ಮೀ ವೇಗದಲ್ಲಿ ಬೈಕ್ ಚಲಾಯಿಸುತ್ತಿದ್ದ ವಿಡಿಯೋ ಒಂದು ಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಇದೀಗ ಬೈಕ್ ಸವಾರ ಸಾಫ್ಟ್ವೇರ್ ಎಂಜಿನಿಯರ್ನ ಬಂಧಿಸಿ, 1000 ಸಿಸಿ ಸೂಪರ್ಬೈಕ್ ಅನ್ನು ಬೆಂಗಳೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ವರದಿ ಬಂದಿದೆ.
“ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ನಲ್ಲಿ ಗಂಟೆಗೆ ಸುಮಾರು 300 ಕಿ.ಮೀ ವೇಗದಲ್ಲಿ ಬೈಕ್ ಚಲಾಯಿಸುತ್ತಿದ್ದ ಸವಾರ ಆತ ಹಾಗೂ ಇನ್ನಿತರರ ಜೀವಕ್ಕೆ ಅಪಾಯವನ್ನೊಡ್ಡಿದ್ದ” ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದರು.
ಕೇಂದ್ರ ಕ್ರೈಂ ಬ್ರಾಂಚ್ (ಸಿಸಿಬಿ) ಈ ಬೈಕನ್ನು ವಶಪಡಿಸಿಕೊಂಡಿದ್ದು, ಮುಂದಿನ ಕ್ರಮಕ್ಕಾಗಿ ಅದನ್ನು ಸಂಚಾರ ಪೊಲೀಸ್ ವಿಭಾಗಕ್ಕೆ ಹಸ್ತಾಂತರಿಸಿದೆ.
ಒಂದು ನಿಮಿಷಕ್ಕಿಂತ ಹೆಚ್ಚು ಉದ್ದವಿರುವ ವೀಡಿಯೊದಲ್ಲಿ, 29 ವರ್ಷದ ಮುನಿಯಪ್ಪ ತನ್ನ ನೀಲಿ ಮೋಟಾರ್ ಸೈಕಲ್ ನಲ್ಲಿ ವೇಗವಾಗಿ ಸಂಚರಿಸುವುದನ್ನು ನೋಡಬಹುದಾಗಿದೆ. ಮಡಿವಾಳ ಬಳಿ ಪ್ರಾರಂಭವಾಗಿ, 13 ಕಿ.ಮೀ ಉದ್ದದ ಫ್ಲೈಓವರ್ ಹಲವಾರು ಐಟಿ ಕಚೇರಿಗಳು ಇರುವ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೊನೆಗೊಳ್ಳುತ್ತದೆ.
“ಮುನಿಯಪ್ಪ ಫ್ಲೈಓವರ್ನಲ್ಲಿ ವೇಗವಾಗಿ ಬೈಕ್ ಸವಾರಿ ಮಾಡುತ್ತಿದ್ದ. ಲಾಕ್ಡೌನ್ ಆದ ಕಾರಣ ರಸ್ತೆಗಳು ಖಾಲಿ ಇದ್ದು ಸವಾರನಿಗೆ ಜೋಶ್ ತಂದಿತ್ತು ಎಂದು ಕಾಣುತ್ತದೆ. ಆದ್ದರಿಂದ ಅವರು ಆ ರೀತಿ ಬೈಕ್ ಓಡಿಸಿದ್ದಾರೆಂದು ನಾನು ಭಾವಿಸುತ್ತೇನೆ.” ಎಂದು ಸಿಸಿಬಿ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಕುಲದೀಪ್ ಜೈನ್ ಐಎಎನ್ಎಸ್ಗೆ ತಿಳಿಸಿದರು.
ಅವರು ಸ್ಟಂಟ್ ಮಾಡಿದ್ದ ನಿಖರ ದಿನಾಂಕವನ್ನು ಕಂಡುಹಿಡಿಯಲು ಪೊಲೀಸರಿಗೆ ಸಾಧ್ಯವಾಗದಿದ್ದರೂ, ನಗರವು ಲಾಕ್ ಡೌನ್ ಆಗಿರುವುದರಿಂದ ಕಳೆದ ವಾರದಲ್ಲಿಯೇ ಇದು ಸಂಭವಿಸಬಹುದೆಂದು ಜೈನ್ ಹೇಳಿದರು. “ಅವನು ಕೇವಲ ಸ್ಟಂಟ್ ಪ್ರದರ್ಶಿಸಲು ಪ್ರಯತ್ನಿಸುತ್ತಿದ್ದ. ತನ್ನ 1,000 ಸಿಸಿ ಮೋಟಾರ್ ಸೈಕಲ್ ಅನ್ನು ಆ ವೇಗದಲ್ಲಿ ಓಡಿಸಿ ತನ್ನ ಧೈರ್ಯ, ಜನಾಕರ್ಷಣೆ ಹೆಚ್ಚಿಸುವುದು ಆತನ ಉದ್ದೇಶವಾಗಿತ್ತು.”ಜೈನ್ ಹೇಳಿದ್ದಾರೆ.
ಸವಾರನು ಹೆಲ್ಮೆಟ್ ಅಳವಡಿಸಿದ ಕ್ಯಾಮೆರಾಹೊಂದಿ ವೀಡಿಯೊವನ್ನು ಚಿತ್ರೀಕರಿಸಿದ್ದಾನೆ. ಆ ಮೋಟಾರ್ ಸೈಕಲ್ 90 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದಾಗ ರೆಕಾರ್ಡಿಂಗ್ ಪ್ರಾರಂಭಿಸಲಾಗಿದೆ. ಸಿಟಿ ಬಸ್, ಕೆಲವು ಆಟೋ ರಿಕ್ಷಾಗಳು, ಟ್ರಕ್ ಹಗೂ ಕಾರುಗಳು ಮತ್ತು ಇತರ ದ್ವಿಚಕ್ರ ವಾಹನಗಳನ್ನು ಶರವೇಗದಲ್ಲಿ ಹಿಂದಿಕ್ಕಿ ಅವನು ಬೈಕ್ ಚಲಾಯಿಸಿದ್ದಾನೆ, ಮುನಿಯಪ್ಪ 140 ಕಿ.ಮೀ ವೇಗದಲ್ಲಿ ಫ್ಲೈಓವರ್ಗೆ ಹತ್ತಿ ನಂತರ ವೇಗವನ್ನು ಇನ್ನಷ್ಟು ಹೆಚ್ಚಿಸಿದ್ದಾನೆ, ತಕ್ಷಣ 200 ಕಿ.ಮೀ ಮತ್ತು ಅದಕ್ಕಿಂತ ಹೆಚ್ಚಿನ ವೇಗವನ್ನು ತಲುಪಿದ ಆತ ಟೊಯೋಟಾ ಎಟಿಯೋಸ್, ಇನ್ನೋವಾ ಮತ್ತು ದ್ವಿಚಕ್ರ ವಾಹನವನ್ನು ಹಿಂದೆ ಹಾಕಿದ್ದು ಬಳಿಕ ನಿಧಾನವಾಗುವ ಮುನ್ನ 290-299 ಕಿ.ಮೀ ವೇಗದಲ್ಲಿದ್ದನು. 100 ಕಿ.ಮೀ.ಗಿಂತಲೂ ಹೆಚ್ಚು ವೇಗದಲ್ಲಿ ಫ್ಲೈಓವರ್ ಇಳಿದ ಆತ ಮೂರು ವಾಹನಗಳನ್ನು ಹಿಂದಿಕ್ಕಿ ಮತ್ತೆ 200 ಕಿ.ಮೀ ವೇಗ ಪಡೆದಿದ್ದರು.
ಮುನಿಯಪ್ಪ ತಮ್ಮ ಈ ವೀಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಮೂಲಕ ಜನರ ಮೆಚ್ಚುಗೆ ಗಳಿಸಿಕೊಳ್ಳಲು ಮುಂದಾದ. ಆದರೆ ಅದುವೇ ಅವನ ಪತ್ತೆಗೆ ಪೋಲೀಸರಿಗೂ ನೆರವಾಗಿ ಬಂದಿದೆ. “ಆತ ವೀಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದ. ನಾವು ಅವನ ಇನ್ಸ್ಟಾಗ್ರಾಮ್ ಹ್ಯಾಂಡಲ್ ನಿಂದ ಆತನ ಪತ್ತೆ ಮಾಡಿದ್ದೆವು. ಇನ್ಸ್ಟಾಗ್ರಾಮ್ ಹ್ಯಾಂಡಲ್ ಆಧರಿಸಿ ನಾವು ನಮ್ಮ ಸೈಬರ್ ತಜ್ಞರನ್ನು ಅವರ ಫೋನ್ ಸಂಖ್ಯೆ ಮತ್ತು ಇತರ ವಿವರಗಳನ್ನು ಪಡೆದುಕೊಳ್ಳಲು ಬಳಸಿದ್ದೆವು.
ರೇಸಿಂಗ್, ವೀಲಿಂಗ್ ಮತ್ತು ಸಂಬಂಧಿತ ಟ್ರಾಫಿಕ್ ಅಪರಾಧಗಳು ಬೆಂಗಳೂರಿನಲ್ಲಿ ನಿಯಮಿತವಾಗಿ ನಡೆಯುತ್ತಲೇ ಇರುತ್ತದೆ. ಆದರೆ ಹೆಚ್ಚಾಗಿ ರಾತ್ರಿಯ ಸಮಯದಲ್ಲಿ ಇದು ಸಂಭವಿಸುವುದು. “ಸಾಮಾನ್ಯ ಸಮಯದಲ್ಲಿ ಈ ವೇಗದಲ್ಲಿ ಸಂಚರಿಸುವುದು ಅಪರೂಪ. ಈ ಸಂಬಂಧ ನಾವು ತಡರಾತ್ರಿ ವಿಶೇಷ ತಪಾಸಣೆ ನಡೆಸುತ್ತೇವೆ” ಎಂದು ಜೈನ್ ಹೇಳಿದ್ದಾರೆ.
Follow us on Social media