ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆ ತಡೆಯಲು ಹಾಗೂ ದಾಖಲಾಗಿದ್ದ ಪ್ರಕರಣಗಳ ದಂಡ ವಸೂಲಿ ಮಾಡಲು ನಗರ ಸಂಚಾರಿ ಪೊಲೀಸರು ಬುಧವಾರ ಅನಿರೀಕ್ಷಿತ ಕಾರ್ಯಾಚರಣೆ ನಡೆಸಿದ್ದು, ಕಾರ್ಯಾಚರಣೆಯಲ್ಲಿ 8362 ಪ್ರಕರಣಗಳಿಂದ ರೂ.43 ಲಕ್ಷ ದಂಡ ವಸೂಲಿ ಮಾಡಿದ್ದಾರೆ.
ಸಂಚಾರಿ ನಿಯಮ ಉಲ್ಲಂಘಿಸಬಾರದು ಎಂದು ಅರಿವಿದ್ದರೂ ಒಂದಲ್ಲಾ ಒಂದು ರೀತಿ ನಿಯಮಗಳನ್ನು ಪಾಲಿಸುತ್ತಿಲ್ಲ. ಅಲ್ಲದೆ ಸಂಚಾರ ಪೊಲೀಸ್ ಇಲಾಖೆಯಿಂದ ನೀಡುವ ನೊಟೀಸ್ನ ಗಂಭೀರವಾಗಿ ವಾಹನ ಮಾಲೀಕರು ತೆಗೆದುಕೊಳ್ಳದ ಕಾರಣ ಅನಿರೀಕ್ಷಿತ ಕಾರ್ಯಾಚರಣೆ ನಡೆಸಿ 8362 ಪ್ರಕರಣಗಳಿಂದ 43,09,944 ಲಕ್ಷ ದಂಡ ವಸೂಲಿ ಮಾಡಲಾಗಿದೆ.
ಈ ಪೈಕಿ 3697 ಹಳೆಯ ಪ್ರಕರಣಗಳಿಂದ 12,36 ಲಕ್ಷ ರೂಪಾಯಿ ದಂಡ ಸಂಗ್ರಹಿಸಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.
ಈ ಹಿಂದೆ ಹೇಳಿಕೆ ನೀಡಿದ್ದ ಸಂಚಾರಿ ಪೊಲೀಸರು ಇತ್ತೀಚೆಗಷ್ಟೇ 95 ಲಕ್ಷಕ್ಕೂ ಹೆಚ್ಚು ಸಂಚಾನ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳಲ್ಲಿ ರೂ. 390 ಕೋಟಿ ದಂಡ ಸಂಗ್ರಹಿಸಬೇಕಾಗಿದೆ ಎಂದು ಹೇಳಿದ್ದರು.
ಇದರಲ್ಲಿ ನೋಟಿಸ್ ಜಾರಿ ಮಾಡಿದ್ದರು ಸಾಕಷ್ಟು ಜನರು ಇನ್ನೂ ದಂಡವನ್ನು ಕಟ್ಟಿಲ್ಲ. ಈ ವಾಹನಗಳನ್ನು ಶೀಘ್ರದಲ್ಲೇ ಹಿಡಿದು, ದಂಡ ವಸೂಲಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ಬೆಳಿಗ್ಗೆ 11.30ರಿಂದ ಮಧ್ಯಾಹ್ನ 2 ಗಂಟೆ ವರೆಗೆ ನಡೆದ ಕಾರ್ಯಾಚರಣೆಯಲ್ಲಿ ರೂ. 43,09,944 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಇದರಲ್ಲಿ ದಾಖಲಾದ 4,665 ಹೊಸ ಪ್ರಕರಣಗಳಲ್ಲಿ ರೂ. 30,65,150 ದಂಡ ಹಾಗೂ 3,697 ಹಳೆಯ ಪ್ರಕರಣಗಳಲ್ಲಿ ರೂ.12.36 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ರವಿಕಾಂತೇಗೌಡ ಅವರು ಮಾಹಿತಿ ನೀಡಿದ್ದಾರೆ.
Follow us on Social media