Breaking News

ಬೆಂಗಳೂರು: ಮಾದಕ‌ ವಸ್ತು ಮಾರಾಟ ಮಾಡುತ್ತಿದ್ದ ಕೇರಳ ಮೂಲದ ನಾಲ್ವರ ಬಂಧನ,50 ಲಕ್ಷ ಮೌಲ್ಯದ ವಸ್ತುಗಳ ವಶ

ಬೆಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಕೇರಳ ಮೂಲದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಹರಿ ಕೃಷ್ಣ ( 26), ಮುಹಮ್ಮದ್ ಫಿಬಿನ್ ( 24), ಹರಿ ಶಂಕರ್ ( 26), ರಾಹುಲ್ ಬಂಧಿತರು.ಇವರೆಲ್ಲರೂ ಕೇರಳ ರಾಜ್ಯದವರಾಗಿದ್ದಾರೆ.

ಬಂಧಿತರಿಂದ 7ಕೆಜಿ ತೂಕದ ಗಾಂಜಾ, 70ಎಲ್ ಎಸ್ ಡಿ ಸ್ಟ್ರಿಪ್ಸ್ ಗಳು, 12 ಕೆಜಿ 300 ಗ್ರಾಂ ತೂಕದ ಹ್ಯಾಶಿಶ್ ಆಯಿಲ್, 170 ಗ್ರಾಂ ಹ್ಯಾಶಿಶ್ ಉಂಡೆ, 5 ಮೊಬೈಲ್ ಫೋನ್, 3,000 ನಗದು ಸೇರಿ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಎಲ್ಲಾ ವಸ್ತುಗಳ ಮೌಲ್ಯ 50 ಲಕ್ಷ ರೂ ಗಳಾಗಿರಬಹುದೆಂದು ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಆರೋಪಿಗಳು ಪ್ರತಿಷ್ಠಿತ ಕಾಲೇಜುಗಳು, ಪಬ್‍ಗಳು, ಐಟಿಬಿಟಿ ಸೆಕ್ಟರ್ ಗಳಿಗೆ ಮಾದಕವಸ್ತುಗಳ ಮಾರಾಟ ನಡೆಸಿದ್ದರು. ಕೆಆರ್ ಪುರ, ಮಾರತ್ತಹಳ್ಳಿ ಸುತ್ತಮುತ್ತಲಿನ ಕಾಲೇಜುಗಳ ಬಳಿ ಈ ದಂಧೆ ವ್ಯಾಪಕವಾಗಿ ನಡೆದಿತ್ತು. 

ಸಧ್ಯ ಈ ಸಂಬಂಧ  ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Source : UNI

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×