ಬೆಂಗಳೂರು : ಪಿಎಸ್‌ಐ ನೇಮಕಾತಿ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಐಡಿ ಅಧಿಕಾರಿಗಳು ಅನೇಕರನ್ನು ಬಂಧಿಸಿದ್ದು, ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಮೊದಲ ರ್‍ಯಾಂಕ್ ಅಭ್ಯರ್ಥಿ ಕುಶಾಲ್ ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ.
ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ವಿಚಾರಣೆಗೆ ಹಾಜರಾಗುವಂತೆ ಮೊದಲ ರ್‍ಯಾಂಕ್ ಪಡೆದಿದ್ದಂತ ಅಭ್ಯರ್ಥಿ ಕುಶಾಲ್ ಕುಮಾರ್ ಗೆ ಸೂಚಿಸಲಾಗಿತ್ತು. ವಿಚಾರಣೆಗೆ ಹಾಜರಾಗಿದ್ದಂತ ಆತನನ್ನು ತನಿಖೆಗೆ ಒಳಪಡಿಸಿದಾಗ ಕಾರ್ಬನ್ ಓಎಂಆರ್ ಶೀಟ್ ಹಾಗು ಓರಿಜಿನಲ್ ಶೀಟ್ ನಲ್ಲಿ ತಿದ್ದಿರೋದು ತಿಳಿದು ಬಂದಿತ್ತು.ಇನ್ನು ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಲಾಗಿದ್ದು, ಅಕ್ರಮ ಸಾಬೀತಾದ ಹಿನ್ನಲೆಯಲ್ಲಿ್ ಇಂದು ಕುಶಾಲ್ ಕುಮಾರ್ ಬಂಧಿಸಲಾಗಿದೆ.
Follow us on Social media