ಬೆಂಗಳೂರು : ಜೆಡಿಎಸ್ ಶಾಸಕ ಗುಬ್ಬಿ ಶ್ರೀನಿವಾಸ್ ಅವರು ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾಯನಾಡಿದ ಅವರು, ಕುಮಾರಸ್ವಾಮಿಗೆ ನಾಚಿಕೆ, ಮಾನ-ಮರ್ಯಾದೆ ಇಲ್ಲ. ಬೆಳಿಗ್ಗೆ ಒಂದು ಹೇಳ್ತಾನೆ, ಸಂಜೆ ಒಂದು ಹೇಳ್ತಾನೆ. ನಾನು ಸರಿಯಾಗಿ ಬ್ಯಾಲೆಟ್ ಪೇಪರ್ ತೋರಿಸಿದ್ದೇನೆ. ಒಂದಲ್ಲಾ, ಎರಡಲ್ಲ ಮೂರ್ನಾಲ್ಕು ನಿಮಿಷ ಪೇಪರ್ ಹಿಡಿದುಕೊಂಡಿದ್ದೇನೆ. ಅದಾದ ಮೇಲೆ ಹೋಗಿ ನಾನು ವೋಟ್ ಹಾಕಿದ್ದೇನೆ. ವೋಟ್ ಮೇಲೆ ನಾನು ಬೆರಳು ಇಟ್ಟಿದ್ರೆ, ಹೆಚ್ಚೆಟ್ಟು ತೆಗಿ ಅನ್ನಬೇಕಿತ್ತು. ಅವನೇನು ಕತ್ತೆ ಕಾಯುತ್ತಿದ್ನಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಕುಮಾರಸ್ವಾಮಿ ಅನಿರೀಕ್ಷಿತವಾಗಿ ಸಿಎಂ ಆದವನು. ಜನ್ಮ ಎತ್ತಿ ಬಂದರೂ ಇವನ ಪಕ್ಷಕ್ಕೆ ಬಹುಮತ ಬರೋಲ್ಲ. ಬೆಳಿಗ್ಗೆ ಒಂದು ಹೇಳ್ತಾಳೆ, ಸಂಜೆ ಒಂದು ಹೇಳ್ತಾನೆ. ಇವನು ಉತ್ತಮ ಎಂದು ಹೇಳಲು ಹೇಗೆ ಸಾಧ್ಯನಾ? ಎಂದು ಪ್ರಶ್ನಿಸಿದ್ದಾರೆ.
Follow us on Social media