ಬೆಂಗಳೂರು : ಬೆಂಗಳೂರಿನ ಆರ್ಚ್‌ಡಯಾಸಿಸ್‌ನ ಆರ್ಚ್ ಬಿಷಪ್ ಬರ್ನರ್ಡ್ ಎಮೆರಿಟಸ್ ಅವರಿಗೆ ಕೊರೊನಾ ಸೋಂಕು ದೃಢವಾಗಿದೆ.
ಆರ್ಚ್ ಬಿಷಪ್ ಎಮಿರೆಟಸ್ ಬರ್ನರ್ಡ್ ಮೊರಾಸ್ ಅವರು ಜುಲೈ 2ರಂದು ಪ್ರತಿನಿತ್ಯದಂತೆ ತಪಾಸಣೆಗೆಂದು ಸೈಂಟ್ ಜಾನ್ಸ್ ವೈದ್ಯಕೀಯ ಕಾಲೇಜಿಗೆ ಹೋಗಿದ್ದರು ಎಂದು ಆರ್ಚ್ ಬಿಷಪ್ ಪೀಟರ್ ಮಚಾದೋ ಅವರು ಬೆಂಗಳೂರಿನ ಆರ್ಚ್‌ಡಯಾಸಿಸ್‌ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜುಲೈ 3ರಂದು ಅವರಿಗೆ ಕೊರೊನಾ ಲಕ್ಷಣಗಳಿರುವುದು ತಿಳಿದುಬಂದಿದ್ದು, ಪ್ರಸ್ತುತ ಅವರ ಪರಿಸ್ಥಿತಿ ಸ್ಥಿರವಾಗಿದೆ ಎಂದು ಸೈಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನ ವೈದ್ಯರು ಭರವಸೆ ನೀಡಿದ್ದಾರೆ.
ಆರ್ಚ್ ಬಿಷಪ್ ಎಮೆರಿಟಸ್ ಅವರು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ನಾವು ಪ್ರಾರ್ಥನೆ ಮಾಡುತ್ತೇವೆ ಎಂದು ಆರ್ಚ್ ಬಿಷಪ್ ಪೀಟರ್ ಮಚಾಡೋ ಅವರು ತಿಳಿಸಿದ್ದಾರೆ.
Follow us on Social media