ಬೆಂಗಳೂರು : ಪ್ರೀತಿಸಿ ಮೋಸ ಹೋದ ಕಾರಣಕ್ಕೆ ಸ್ಯಾಂಡಲ್‌ವುಡ್ ನಟಿ ಚಂದನ ತನ್ನ ಮನೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ವಿಷ ಸೇವಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.
ತಾವರೆ ಕೆರೆಯ ಕೃಷ್ಣ ಮೂರ್ತಿ ಲೇ ಔಟ್‌ನಲ್ಲಿರುವ ತನ್ನ ಮನೆಯಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲೇ ನಟಿ ಸೆಲ್ಫಿ ವಿಡಿಯೋ ಮಾಡಿದ್ದು ಅದರಲ್ಲಿ ತನ್ನ ಪ್ರಿಯಕರ ದಿನೇಶ್ ತನ್ನನ್ನು ವಿವಾಹವಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ. ದಿನೇಶ್ ಮನೆಗೆ ನ್ನ ಕುಟುಂಬಸ್ಥರು ಮದುವೆ ಪ್ರಸ್ತಾಪ ಮಾತುಕತೆಗೆ ತೆರಳಿದ್ದು ಆದರೆ, ದಿನೇಶ್ ತಾಯಿ ಗಾಯತ್ರಿ, ಮಾವ ದಯಾನಂದ ಎಂಬುವವರು ಚಂದನಾ ಕ್ಯಾರೆಕ್ಟರ್ ಸರಿಯಿಲ್ಲ, ನಿಮ್ಮ ಹುಡುಗಿಯನ್ನು ಸರಿಯಾಗಿ ನೋಡಿಕೊಳ್ಳಿ ಎಂದು ಹೇಳಿ ಅವಮಾನ ಮಾಡಿ ಕಳಿಸಿದ್ದಾರೆ. ಈ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.
ಇನ್ನು ನಟಿ ಚಂದನ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಯುತ್ತಿದ್ದಂತೆ ಪ್ರಿಯಕರ ದಿನೇಶ್ ತಲೆಮರೆಸಿಕೊಂಡಿದ್ದು ಸದ್ದುಗುಂಟೆ ಪಾಳ್ಯ ಪೊಲೀಸರು ದಿನೇಶ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ನಟಿ ಸಿನೆಮಾ,ಕಿರುತೆರೆ ಹಾಗೂ ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.
Follow us on Social media