ಚಿತ್ರದುರ್ಗ: ರಾಜ್ಯದ ಪ್ರಭಾವಿ ಬಿಜೆಪಿ ಶಾಸಕರೊಬ್ಬರಿಗೆ ನಗ್ನವಾಗಿ ವಿಡಿಯೋ ಕಾಲ್ ಮಾಡಿ, ಅಶ್ಲೀಲ ವಿಡಿಯೋ ಕಳುಹಿಸಿರುವ ಯುವತಿ ಹನಿ ಟ್ರ್ಯಾಪ್ ಗೆ ಯತ್ನಿಸಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.
ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿ ಮೊಬೈಲ್‌ಗೆ ಅಪರಿಚಿತ ಯುವತಿಯೋರ್ವಳು ವಿಡಿಯೋ ಕಾಲ್ ಹಾಗೂ ಅಶ್ಲೀಲ ವಿಡಿಯೋಗಳನ್ನ ಕಳುಹಿಸಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಶಾಸಕರನ್ನ ಹನಿಟ್ರ್ಯಾಪ್ ಬಲೆಗೆ ಬೀಳಿಸಲು ವಿಫಲಯತ್ನ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಚಿತ್ರದುರ್ಗ ಸೈಬರ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಅಕ್ಟೋಬರ್ 31 ರಂದು ಶಾಸಕ ತಿಪ್ಪಾರೆಡ್ಡಿ ಮೊಬೈಲ್‌ಗೆ ಓರ್ವ ಅಪರಿಚಿತ ಯುವತಿಯಿಂದ ಫೋನ್ ಕರೆ ಬಂದಿದೆ. ಆರಂಭದಲ್ಲಿ ನಾರ್ಮಲ್ ಆಡಿಯೋ ಕಾಲ್ ಮಾಡಿದ್ದ ಯುವತಿ, ನಂತರ ವಾಟ್ಸ್ಆ್ಯಪ್ ಮೂಲಕ ವಿಡಿಯೋ ಕಾಲ್ ಮಾಡಿದ್ದಾಳೆ. ವಿಡಿಯೋ ಕಾಲ್ ರಿಸೀವ್ ಮಾಡಿದ್ದ ಶಾಸಕರಿಗೆ ಬಿಗ್ ಶಾಕ್ ಕಾದಿತ್ತು. ಯಾಕಂದ್ರೆ ವಿಡಿಯೋ ಕಾಲ್ ಮಾಡಿದ್ದ ಯುವತಿ ನಗ್ನವಾಗಿದ್ದಳು ಎನ್ನಲಾಗಿದೆ.
ಯುವತಿ ಹಿಂದಿಯಲ್ಲಿ ಮಾತನಾಡಿದ್ದಳಂತೆ. ಕೂಡಲೇ ಶಾಸಕರು ಫೋನ್ ಕಟ್ ಮಾಡಿದ್ದಾರೆ. ನಂತರ ಅದೇ ಅಪರಿಚಿತ ನಂಬರ್ನಿಂದ ಅಶ್ಲೀಲ ವಿಡಿಯೋಗಳು ಬಂದಿವೆ. ಇದನ್ನ ನೋಡಿದ ಶಾಸಕರು ಅಶ್ಲೀಲ ವಿಡಿಯೋ ಡಿಲೀಟ್ ಮಾಡಿ, ನಂಬರ್ ಬ್ಲಾಕ್ ಮಾಡಿದ್ದಾರೆ. ಬಳಿಕ ಚಿತ್ರದುರ್ಗ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
Follow us on Social media