ಲಾಹೋರ್ : ಪಾಕಿಸ್ತಾನದ ಮಾಜಿ ಕ್ರಿಕೆಟರ್ ಶಾಹಿದ್ ಅಫ್ರಿದಿಗೆ ಕೊರೊನಾ ಪಾಸಿಟಿವ್ ಆಗಿದ್ದು ಈ ಕುರಿತಾಗಿ ಅವರೇ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಗುರುವಾರದಿಂದ ನನಗೆ ಅನಾರೋಗ್ಯ ಕಾಡಿದ್ದು ಮೈ ಕೈಯಲ್ಲಿ ಬಹಳ ನೋವಿತ್ತು. ಪರೀಕ್ಷೆ ಮಾಡಿಸಿದಾಗ ದುರಾದೃಷ್ಟವಶಾತ್ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ನಾನು ಶೀಘ್ರ ಗುಣಮುಖನಾಗುವಂತೆ ಅಲ್ಲಾಹುನಲ್ಲಿ ಪ್ರಾರ್ಥಿಸಿ ಎಂದು ಕೇಳಿಕೊಂಡಿದ್ದಾರೆ.
ಈ ಮೊದಲು ಪಾಕಿಸ್ತಾನದ ಕ್ರಿಕೆಟ್ ಆಟಗಾರರಾದ ತೌಫೀಕ್ ಉಮಾರ್, ಝಫರ್ ಸರ್ಫಾರಾಝ್ಗೆ ಕೊರೊನಾ ಇರುವುದು ದೃಢಪಟ್ಟಿದ್ದು ಪಾಕ್ನ ಕ್ರಿಕೆಟಿಗರಲ್ಲಿ ಕೊರೊನಾ ದೃಢಪಟ್ಟ ಮೂರನೇ ವ್ಯಕ್ತಿಯಾಗಿದ್ದಾರೆ ಅಫ್ರಿದಿ.
ಶಾಹಿದ್ ಅಫ್ರಿದಿ ಮೇ ತಿಂಗಳ ಆರಂಭದಲ್ಲಿ ಬಾಂಗ್ಲಾದೇಶದ ಮುಶ್ಕೀರ್ ರಹೀಮ್ ಅವರ ಬ್ಯಾಟ್ ಅನ್ನು ಹರಾಜಿನಲ್ಲಿ ಖರೀದಿಸಿ, ಕೊರೋನಾ ವಿರುದ್ಧ ಹೋರಾಟಕ್ಕಾಗಿ ಹಣ ನೀಡಿದ್ದರು.
Follow us on Social media