ಬೆಂಗಳೂರು: ಪದವಿ ಮತ್ತು ವೃತ್ತಿಪರ ಶಿಕ್ಷಣವನ್ನು ಆನ್ ಲೈನ್ ಮೂಲಕ ನೀಡುವ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾವಕ್ಕೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ದೇಶದ ಸಾಮಾಜಿಕ ವಾಸ್ತವದ ಅರಿವಿಲ್ಲದವರ ಕುರುಡುತನದ ಆಲೋಚನೆ ಇದಾಗಿದೆ. ಇಂತಹ ಕ್ರಮದಿಂದ ಸಮಾಜದ ಅತಿ ದೊಡ್ಡ ವರ್ಗ ಶಿಕ್ಷಣದಿಂದ ವಂಚಿತವಾಗಲಿದೆ ಎಂದು ಟೀಕಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಭಾರತದ ಅಸ್ಥಿತ್ವ ಇರುವುದು ಹಳ್ಳಿಗಳಲ್ಲಿ. ಗ್ರಾಮೀಣ ಭಾಗದಲ್ಲಿ ಕಂಪ್ಯೂಟರ್, ಲ್ಯಾಪ್ ಟಾಪ್,ಸ್ಮಾರ್ಟ್ ಫೋನ್ ಗಳು ಎಲ್ಲಿಂದ ಬರಬೇಕು” ಎಂದು ಪ್ರಶ್ನಿಸಿದ್ದಾರೆ.
Follow us on Social media