ಬೆಂಗಳೂರು: ಕೆಎಸ್ ಆರ್ ಟಿಸಿ, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯು ನೂತನವಾಗಿ
ಪಾರ್ಸಲ್ ಮತ್ತು ಕೊರಿಯರ್ ಸೇವೆಯನ್ನು ರಾಜ್ಯ ಹಾಗೂ ಅಂತರ್ ರಾಜ್ಯ ಕೆಎಸ್ ಆರ್ ಟಿಸಿಯ ಮಾರ್ಗಗಳಲ್ಲಿ ಪ್ರಾರಂಭಿಸುತ್ತಿದೆ.
ಹೊಸ ಯೋಜನೆಗೆ ಸಂಬಂಧಿಸಿದಂತೆ ಪ್ರಯಾಣಿಕರಿಂದ ಅಗತ್ಯ ಸಲಹೆ, ಸೂಚನೆಗಳನ್ನು ಕೆಎಸ್ ಆರ್ ಟಿಸಿ ಕೋರಿದೆ. ಆಗಸ್ಟ್ 15ರ
ಸಂಜೆ 5 ಗಂಟೆಯೊಳಗೆ ಪ್ರಯಾಣಿಕರು ತಮ್ಮ ಸಲಹೆ, ಸೂಚನೆಗಳನ್ನು ಸಲ್ಲಿಸಬಹುದಾಗಿದೆ.
ಬ್ರಾಂಡ್ ಹೆಸರು ಆಯ್ಕೆಯಾದ ಓರ್ವ ಪ್ರಯಾಣಿಕರಿಗೆ ಕೆಎಸ್ ಆರ್ ಟಿಸಿಯ ಯಾವುದೇ ಮಾದರಿಯ ಬಸ್ಸಿನಲ್ಲಿ ತಮ್ಮ ಇಚ್ಚೆಯ
ಒಂದು ಮಾರ್ಗದಲ್ಲಿ ಉಚಿತವಾಗಿ ಪ್ರಯಾಣಿಸಲು (ಹೋಗಿ/ಬರಲು) ಟಿಕೆಟ್ ನೀಡಲಾಗುವುದು ಎಂದು ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಹೇಳಿಕೆಯಲ್ಲಿ ತಿಳಿಸಿದ್ದಾರೆ.