ದಾವಣಗೆರೆ: ಪೊಲೀಸ್ ಕಾನ್‌ಸ್ಟೆಬಲ್ ಒಬ್ಬ ವಾಟ್ಸಾಪ್ ಗ್ರೂಪ್ ನಲ್ಲಿ ‘ಪವರ್ ಆಫ್ ಪಾಕಿಸ್ತಾನ್’ ಫೇಸ್‌ಬುಕ್ ಪುಟವನ್ನು ಹಂಚಿಕೊಂಡಿದ್ದಕ್ಕಾಗಿ ಸೇವೆಯಿಂದ ಅಮಾನತುಗೊಂಡಿರುವ ಘಟನೆ ದಾವಣಗೆರೆ ಬಸವನಗರೆ ಠಾಣೆಯಲ್ಲಿ ನಡೆದಿದೆ.
ಬಸವನಗರ ಠಾಣೆಯ ಪೊಲೀಸ್ ಕಾನ್‌ಸ್ಟೆಬಲ್ ಸನಾವುಲ್ಲಾ ಪಾಕ್ ಪರವಾದ ಫೇಸ್‌ಬುಕ್ ಪುಟವನ್ನು ಹಂಚಿಕೊಂಡು ಅಮಾನತು ಶಿಕ್ಷೆಗೆ ಒಳಗಾಗಿರುವ ವ್ಯಕ್ತಿಯಾಗಿದ್ದು ಇದೇ ರೀತಿಯ ಕೃತ್ಯಕ್ಕಾಗಿ ಈತ ಈ ಹಿಂದೆ 2014 ರಲ್ಲಿಸಹ ಒಮ್ಮೆ ಅಮಾನತು ಶಿಕ್ಷೆಗೆ ಗುರಿಯಾಗಿದ್ದ.
2008 ಬ್ಯಾಚ್ ಪೊಲೀಸ್ ಟೀಂ ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ ಅವರು ‘ಪವರ್ ಆಫ್ ಪಾಕಿಸ್ತಾನ್’ ಫೇಸ್‌ಬುಕ್ ಪುಟವನ್ನು ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಪರಾಧಕ್ಕೆ ತಕ್ಷಣ ಜಾರಿಗೆ ಬರುವಂತೆ ಸನಾವುಲ್ಲಾ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಜಿಲ್ಲಾಧಿಕಾರಿ ಹನುಮಂತರಾಯ, ಕಾನ್‌ಸ್ಟೆಬಲ್‌ನನ್ನು ಅಮಾನತುಗೊಳಿಸಲಾಗಿದೆ ಮತ್ತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಪೊಲೀಸ್ ಉಪ ಅಧೀಕ್ಷಕ ಹಂತದ ಅಧಿಕಾರಿಯೊಬ್ಬರು ತನಿಖೆ ನಡೆಸಿದ್ದಾರೆ ಎಂದು ಅವರು ಹೇಳಿದರು.
Follow us on Social media