ದಾವಣಗೆರೆ: ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ತಂದೆ-ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಕೈಗಾರಿಕಾ ಪ್ರದೇಶದ ಸಮೀಪದಲ್ಲಿ ಸಂಭವಿಸಿದೆ.
ತುರ್ಚಗಟ್ಟ ನಿವಾಸಿ ಸಿದ್ದೇಶ್(30), 3 ವರ್ಷದ ಮಗ ಮೃತ ದುರ್ದೈವಿಗಳು.
ತಂದೆ-ಮಗ ತುರ್ಚಗಟ್ಟದಿಂದ ದಾವಣಗೆರೆಗೆ ಬರುತ್ತಿದ್ದಾಗ ಮತ್ತೊಂದು ಬೈಕ್ನಲ್ಲಿ ವೇಗವಾಗಿ ಬಂದ ಯುವಕರು ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಎರಡೂ ಬೈಕ್ಗಳು ನುಜ್ಜುಗುಜ್ಜಾಗಿದ್ದು, ಕೆಳಗೆ ಬಿದ್ದ ತಂದೆ-ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಯುವಕರು ಅತಿ ವೇಗದಲ್ಲಿ ಬೈಕ್ ಓಡಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಘಟನೆಯಲ್ಲಿ ಇಬ್ಬರೂ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on Social media