ಬೆಂಗಳೂರು: ಡ್ರಿಲ್ಲಿಂಗ್ ಮೆಷಿನ್ ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಇದರಿಂದಾಗಿ ದರೋಡೆ ಪ್ರಕರಣವೊಂದು ವಿಫಲವಾಗಿರುವ ಆಶ್ಚರ್ಯಕರ ಘಟನೆ ನಗರದ ದೊಡ್ಡ ಗೊಲ್ಲರಹಟ್ಟಿ ಬಳಿ ವರದಿಯಾಗಿದೆ.
ನಗರದ ಮಣಪ್ಪುರಂ ಗೋಲ್ಡ್ ಲೋನ್ ಅಂಗಡಿಯು ದರೋಡೆಕೋರರ ದಾಳಿ ನಂತರವೂ ಸುರಕ್ಷಿತವಾಗಿದೆ.
ಗೋಲ್ಡ್ ಲೋನ್ ಅಂಗಡಿಯನ್ನು ದರೋಡೆ ಮಾಡಲು ದರೋಡೆಕೋರರು ಅದೇ ಕಟ್ಟಡದ ಮೇಲ್ಭಾಗದ ಮತ್ತೊಂದು ಶಾಪ್ನಿಂದ ಒಳನುಗ್ಗಿದ್ದರು. ದರೋಡೆ ಮಾಡಲು ಸಂಚು ರೂಪಿಸಿ ಅಂಗಡಿಯ ಕಾಂಕ್ರಿಟ್ ನೆಲವನ್ನು ಕೊರೆಯುವ ಪ್ಲಾನ್ ಮಾಡಿದ್ದರು.
ಆ.2 ರ ರಾತ್ರಿ ದ್ವಿಚಕ್ರವಾಹನದಲ್ಲಿ ಬಂದಿದ್ದ ದರೋಡೆಕೋರರು ಮಣಪ್ಪುರಂ ಅಂಗಡಿಯ ಸ್ಟ್ರಾಂಗ್ ರೂಮ್ನ ಮೇಲ್ಭಾಗದ ಛಾವಣಿಗೆ ಡ್ರಿಲ್ಲಿಂಗ್ ಮೆಷಿನ್ ಉಪಯೋಗಿಸಿ ಕೊರೆಯುವುದಕ್ಕೆ ಮುಂದಾಗಿದ್ದರು. ಆದರೆ, ಮೆಷೀನ್ ನಿಂದ ಎಷ್ಟೇ ಪ್ರಯತ್ನಿಸಿದ್ದರೂ ಆ ಡ್ರಿಲ್ಲಿಂಗ್ ಯಂತ್ರ ಕೆಲಸ ಮಾಡಲಿಲ್ಲ.
ನಂತರ ಬೇರೆ ವಿಧಿ ಇಲ್ಲದೇ ಕಳ್ಳರು ಕಂಪ್ಯೂಟರ್ ಅಂಗಡಿಯಲ್ಲಿದ್ದ ಎರಡು ಸಾವಿರ ನಗದು, ಸಿಸಿ ಕ್ಯಾಮಾರಾ ಹಾಗೂ ಡಿವಿಆರ್ ಕಳವು ಮಾಡಿ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Follow us on Social media