ಆಡಿಲೇಡ್: ಇಂಗ್ಲೆಂಡ್ ಓಪನರ್‌ಗಳ ಸಿಡಿಲಬ್ಬರದ ಬ್ಯಾಟಿಂಗ್‍ಗೆ ಭಾರತ ಮಂಕಾಗಿ ಸೋಲುಂಡಿದೆ. ಇಂಗ್ಲೆಂಡ್ 10 ವಿಕೆಟ್‍ಗಳ ಭರ್ಜರಿ ಜಯದೊಂದಿಗೆ 3ನೇ ಬಾರಿ ಫೈನಲ್ ಪ್ರವೇಶಿಸಿದೆ.
ಭಾರತ ನೀಡಿದ 169 ರನ್‍ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್‍ಗೆ ಮುಂದಾಗಿ ವಿಕೆಟ್ ನಷ್ಟವಿಲ್ಲದೇ 16 ಓವರ್‌ಗಲ್ಲಿ 170 ರನ್ ಸಿಡಿಸಿ 10 ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ಫೈನಲ್‍ಗೆ ಲಗ್ಗೆ ಇಟ್ಟಿದೆ. ಈ ಜಯದೊಂದಿಗೆ ನ.13 ರಂದು ಫೈನಲ್‍ನಲ್ಲಿ ಪಾಕಿಸ್ತಾನವನ್ನು ಇಂಗ್ಲೆಂಡ್ ಎದುರಿಸಲಿದೆ. ಇತ್ತ ಈ ಸೋಲಿನೊಂದಿಗೆ ಭಾರತ ತಂಡ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಇಂಗ್ಲೆಂಡ್ ಆರಂಭಿಕರಾದ ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಭಾರತ ಬೌಲರ್‌ಗಳನ್ನು ಮೊದಲ ಓವರ್‌ನಿಂದಲೇ ದಂಡಿಸಲು ಆರಂಭಿಸಿದರು. ಅವಕಾಶ ಸಿಕ್ಕಾಗಲೆಲ್ಲಾ ಬೌಂಡರಿ, ಸಿಕ್ಸ್‌ಗಳ ಮೂಲಕ ಮನಮೋಹಕವಾಗಿ ಆಡಿದ ಈ ಜೋಡಿ ಅಜೇಯ 170 ರನ್ ಜೊತೆಯಾಟದ ಮೂಲಕ ಅಬ್ಬರಿಸಿ ಬೊಬ್ಬಿರಿಯಿತು. ಬಟ್ಲರ್ 80 ರನ್ (49 ಎಸೆತ, 9 ಬೌಂಡರಿ, 3 ಸಿಕ್ಸ್) ಮತ್ತು ಹೇಲ್ಸ್ 86 ರನ್ (47 ಎಸೆತ, 4 ಬೌಂಡರಿ, 7 ಸಿಕ್ಸ್) ಸಿಡಿಸಿ ಅಬ್ಬರಿಸಿದ ಪರಿಣಾಮ ಇನ್ನೂ 24 ಎಸೆತ ಬಾಕಿ ಇರುವಂತೆ ಇಂಗ್ಲೆಂಡ್ ಜಯ ಗಳಿಸಿ ಸಂಭ್ರಮಿಸಿತು.
Follow us on Social media