Breaking News

ಟಾಲಿವುಡ್ ನಲ್ಲೂ ಹವಾ ಎಬ್ಬಿಸುತ್ತಿರುವ ಪೊಗರು: ಖರಾಬು… ಹಾಡಿನ ತೆಲುಗು ವರ್ಷನ್ ಆ.6ಕ್ಕೆ ರಿಲೀಸ್

ನಟ ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಚಿತ್ರ ಇದೀಗ ಟಾಲಿವುಡ್ ನಲ್ಲೂ ಹವಾ ಎಬ್ಬಿಸುತ್ತಿದ್ದು, ಈಗಾಗಲೇ ಬಿಡುಗಡೆಗೂ ಮುನ್ನವೇ ಪೊಗಲು ಭಾರೀ ಸದ್ದು ಮಾಡಿದೆ. ಬಿಡುಗಡೆಯಾಗಿರುವ ಹಾಡೊಂಂದನ್ನು 9 ಕೋಟಿಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಇದೀಗ ಚಿತ್ರದ ಮತ್ತೊಂದು ಹಾಡು ಟಾಲಿವುಡ್ ನಲ್ಲಿ ಧೂಳೆಬ್ಬಿಸಲು ಸಿದ್ಧವಾಗಿದೆ. 

ಪರಭಾಷೆಯಲ್ಲಿ ತೆರೆ ಕಾರಣಲು ಸಿದ್ಧವಾಗಿರುವ ಪೊಗಲು ಚಿತ್ರದ ಖರಾಬು ಹಾಡು ಕನ್ನಡದಲ್ಲಿ ಹಿಟ್ ಆಗಿದೆ. ಇದೀಗ ಈ ಹಾಡಿನ ತೆಲುಗು ವರ್ಷನ್ ಆಗಸ್ಟ್ 6ರಂದು ಟಾಲಿವುಡ್ ನಲ್ಲಿ ಬಿಡುಗಡೆಯಾಗಲಿದೆ. 

ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿಯವರು ಈ ಹಾಡಿನ ಸಾಹಿತ್ಯ ಬರೆದಿದ್ದು, ಸಂಗೀತವನ್ನೂ ಸಂಯೋಜಿಸಿದ್ದಾರೆ. ಈಗಾಗಲೇ ಈ ಹಾಡು ಕನ್ನಡದಲ್ಲಿ ದೊಡ್ಡ ಹಿಟ್ ಕಂಡಿದ್ದು, ತೆಲುಗಿನಲ್ಲಿ ಬಿಡುಗಡೆಯಾಗಲಿರುವ ಈ ಹಾಡು ಯಾವ ರೀತಿ ಮೂಡಿಬರಲಿದೆ ಎಂಬುದರ ಕುರಿತು ಸಿನಿಪ್ರಿಯರಲ್ಲಿ ನಿರೀಕ್ಷೆ ಹುಟ್ಟಿಸಿದೆ. ತೆಲುಗು ವರ್ಷನ್’ನ ಖರಾಬು ಹಾಡನ್ನು ಅನುರಾಗ್ ಸಿಂಗ್ ಅವರು ಹಾಡಿದ್ದಾರೆ.  

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×