ಬೆಂಗಳೂರು : ಪಕ್ಷದ ವರಿಷ್ಠರ ನಡೆ ಹಾಗೂ ಪಕ್ಷದಲ್ಲಿ ಸೂಕ್ತಸ್ಥಾನಮಾನ ಸಿಗದ ಹಿನ್ನಲೆ ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ಮೇಲ್ಮನೆಯ ಮಾಜಿ ಸದಸ್ಯ ರಮೇಶ್ ಬಾಬು ರಾಜೀನಾಮೆ ನೀಡಿದ್ದು ದಾವಣಗೆರೆಯಲ್ಲಿ ರಾಜೀನಾಮೆ ಸಲ್ಲಿಸಿರುವುದನ್ನು ಅವರು ಸ್ಪಷ್ಟಪಡಿಸಿದ್ದಾರೆ.ಆಗ್ನೇಯ ಪದವೀಧರರ ಕ್ಷೇತ್ರದಿಂದ ಜಾತ್ಯತೀತ ಜನತಾ ದಳ ಟಿಕೆಟ್ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ರಮೇಶ್ ಬಾಬು ಜೆಡಿಎಸ್ಗೆ ವಿದಾಯ ಹೇಳಿದ್ದಾರೆ. ಪದವೀಧರ ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ರಮೇಶ್ ಬಾಬು ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆಯೂ ಇದೆ ಹಾಗೂ ಬಿಜೆಪಿ ಸೇರುವ ಸಾಧ್ಯತೆಯಿದೆ ಎನ್ನಲಾಗಿದೆಯಾದರೂ ಅದಿನ್ನೂ ಸ್ಪಷ್ಟವಾಗಿಲ್ಲ.ಜೆಡಿಎಸ್ನಲ್ಲಿ ಪ್ರಮುಖ ವಕ್ತಾರರಾಗಿಯೂ ಗುರುತಿಸಿಕೊಂಡಿದ್ದ ರಮೇಶ್ ಬಾಬು ಅವರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಪಕ್ಷದಲ್ಲಿ ಸೂಕ್ತಸ್ಥಾನಮಾನ ಸಿಕ್ಕಿರಲಿಲ್ಲ.ಹಾಗೂ ಪಕ್ಷದಲ್ಲಿ ಕೆಲವರ ಸರ್ವಾಧಿಕಾರ ಮತ್ತು ವರಿಷ್ಠರ ನಿರ್ಲಕ್ಷವೂ ಅವರನ್ನು ಬೇಸರಗೊಳಿಸಿತ್ತು.
Follow us on Social mediaAbout the author
Related Posts
February 20, 2021