Breaking News

ಜು.10ರಿಂದ ಎಲ್ಲಾ ಶನಿವಾರಗಳಂದು ಶಾಲಾ ಕಚೇರಿಗಳಿಗೆ ರಜೆ: ಶಿಕ್ಷಣ ಇಲಾಖೆ ಮಹತ್ವದ ಆದೇಶ

ಬೆಂಗಳೂರು:  ಶಿಕ್ಷಣ ಇಲಾಖೆಯ ಎಲ್ಲಾ ಶಾಲಾ ಕಚೇರಿಗಳಿಗೆ ಎರಡನೆ ಶನಿವಾರ ಮತ್ತು ನಾಲ್ಕನೇ ಶನಿವಾರಗಳನ್ನು ಸೇರಿಸಿಕೊಂಡಂತೆ 2020ರ ಜುಲೈ 10 ರಿಂದ ಎಲ್ಲಾ ಶನಿವಾರಗಳವರೆಗೆ ರಜೆ ಅನ್ವಯಿಸುವಂತೆ ಪ್ರಾಥಮಿಕ ಶಿಕ್ಷಣ ಇಲಾಖೆ‌ ನಿರ್ದೇಶಕರು ಆದೇಶಿಸಿದ್ದಾರೆ.

ಕೋವಿಡ್ -19 ಸೋಂಕು ಹರಡುವಿಕೆಯನ್ನು ನಿಯಂತ್ರಣ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಎಲ್ಲಾ ಶಾಲೆಗಳಿಗೆ ಕಚೇರಿಗಳಿಗೆ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರಗಳನ್ನು ಸೇರಿಸಿಕೊಂಡಂತೆ 2020ರ ಜುಲೈ ಎಲ್ಲಾ ಶನಿವಾರಗಳಂದು ವಿಪತ್ತು ನಿರ್ವಹಣಾ ಕಾಯ್ದೆ 2005 ರಡಿಯಲ್ಲಿ ಹೊರಡಿಸಲಾಗಿರುವ ಆದೇಶ ಅನ್ವಯವಾಗುತ್ತದೆ. ಈ ರಜೆಯು ಕೋವಿಡ್‌ -19 ಕಾರ್ಯಕ್ಕೆ ನಿಯುಕ್ತರಾಗಿರುವ ಶಿಕ್ಷಕರು, ಅಧಿಕಾರಿ ಸಿಬ್ಬಂದಿಯವರಿಗೆ ಹಾಗೂ ಎಸ್.ಎಸ್.ಎಲ್.ಸಿ ಮೌಲ್ಯಮಾಪನ ಕಾರ್ಯಕ್ಕೆ ನಿಯೋಜಿತರಾಗಿರುವ ಶಿಕ್ಷಕರು ಅಧಿಕಾರಿ ಸಿಬ್ಬಂದಿಯವರಿಗೆ, ಅನ್ವಯವಾಗುವುದಿಲ್ಲವೆಂದು ಸ್ಪಷ್ಟಪಡಿಸಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×