ಮಂಡ್ಯ: ಜುಲೈ ಮಧ್ಯಭಾಗದಲ್ಲಿ ಸಕ್ಕರೆ ಉತ್ಪಾದನಾ ಚಟುವಟಿಕೆಗಳನ್ನು ಆರಂಭಿಸುವಂತೆ ಜಿಲ್ಲೆಯ ಎಲ್ಲಾ ಐದು ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ ಮಂಗಳವಾರ ಸೂಚನೆ ನೀಡಲಾಗಿದೆ.
ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬುಧವಾರ ಬಿಡುಗಡೆ ಮಾಡಿರುವ ಪ್ರಕಟಣೆಯಂತೆ, 2020-21ರ ಋತುವಿನಲ್ಲಿ ಕಬ್ಬು ಅರಿಯುವ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಲಾಯಿತು.
ಜುಲೈ ಎರಡನೇ ವಾರದಲ್ಲಿ ಕಬ್ಬು ಅರಿಯುವ ಚಟುವಟಿಕೆಗಳನ್ನು ಆರಂಭಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಎಂ ವಿ ವೆಂಕಟೇಶ್ ಸಭೆಯಲ್ಲಿ ಸೂಚಿಸಿದ್ದಾರೆ.
ಜೂನ್ 25ಕ್ಕು ಮೊದಲು ಕಬ್ಬು ಬೆಳೆಗಾರರಿಗೆ ನೀಡಬೇಕಿರು ಬಾಕಿ ಹಣವನ್ನು ಇತ್ಯರ್ಥಗೊಳಿಸುವಂತೆ ಸಭೆಯಲ್ಲಿ ಜಿಲ್ಲಾಧಿಕಾರಿಯವರು ಕೊಪ್ಪದಲ್ಲಿನ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆ ಮತ್ತು ಮದ್ದೂರು ಬಳಿಯ ಚಾಮುಂಡೇಶ್ವರಿ ಸಕ್ಕರೆ (ಚಾಮ್ ಶುಗರ್ಸ್) ಕಾರ್ಖಾನೆಗಳಿಗೆ ಸೂಚಿಸಿದರು. 2019-2020 ಹಂಗಾಮಿನಲ್ಲಿ ಬೆಳಗಾರರಿಂದ ಖರೀದಿಸಿದ ಈ ಎರಡೂ ಎರಡೂ ಕಾರ್ಖಾನೆಗಳು ಬಾಕಿಯನ್ನು ಚುಕ್ತಾ ಮಾಡಿಲ್ಲ. ಮಂಡ್ಯ ಜಿಲ್ಲೆಯಲ್ಲಿ ಏಳು ಸಕ್ಕರೆ ಕಾರ್ಖಾನೆಗಳಿವೆ.
ಈ ಪೈಕಿ ನಗರದಲ್ಲಿನ ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಶುಗರ್ ಕಂಪನೆ (ಮೈಶುಗರ್) ಮತ್ತು ಪಾಂಡವಪುರದ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ (ಪಿಎಸ್ಎಸ್ಕೆ)ಗಳು ತಾಂತ್ರಿಕ ತೊಂದರೆಗಳಿಂದ ನಿಷ್ಕ್ರಿಯವಾಗಿವೆ. ಇವುಗಳನ್ನು ಬಿಜೆಪಿ ಹಿರಿಯ ಮುಖಂಡ ಮತ್ತು ಮಾಜಿ ಸಚಿವ ಮುರಗೇಶ್ ನಿರಾಣಿ ವಹಿಸಿಕೊಂಡಿದ್ದು, ಶೀಘ್ರದಲ್ಲೇ ಕಾರ್ಯ ಆರಂಭಿಸುವ ನಿರೀಕ್ಷೆಯಿದೆ.
Follow us on Social media