ಬೆಂಗಳೂರು: ಕೇಂದ್ರದ ತೈಲಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಗೆ ಪೊಲೀಸರು ಅನುಮತಿ ನೀಡದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಜನಪರ ಹೋರಾಟಕ್ಕೆ ಜನಸಾಮಾನ್ಯರ ಧ್ವನಿಯೇ ಕಾಂಗ್ರೆಸ್‌ಗೆ ಶಕ್ತಿ ಮತ್ತು ಅನುಮತಿಯಾಗಿದ್ದು, ಬೇರೆ ಯಾರ ಅನುಮತಿಯೂ ಬೇಕಿಲ್ಲ ಎಂದು ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿಂದು ಪ್ರತಿಭಟನಾ ರಾಲಿಯನ್ನುದ್ದೇಶಿಸಿ ಮಾತನಾಡಿದ ಶಿವಕುಮಾರ್,ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಪಕ್ಷ ಕಾಂಗ್ರೆಸ್. ತಾವು ಇವರ ಕೇಸ್‌ಗಳಿಗೆ ಹೆದರಿ ಕೂರುವವನಲ್ಲ. ಡಿಸಿಪಿ ಯಾವ ಕೇಸ್ ಬೇಕಾದರೂ ಹಾಕಿಕೊಳ್ಳಲಿ.ನಾವು ಸಾಮಾನ್ಯ ಜನರ ಬದುಕಿನ ಉಳಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಕೇಂದ್ರ ಸರ್ಕಾರ ತೈಲ ಬೆಲೆ ಏರಿಸಿ ಜನಸಾಮಾನ್ಯರ ಬದುಕನ್ನೇ ಸುಡುತ್ತಿದೆ.ಎಡಗಡೆಯ ಕಚೇರಿ ಏನು ಮಾಡುತ್ತಿದೆ, ಬಲಗಡೆಯ ಕಚೇರಿ ಏನು ಮಾಡುತ್ತಿದೆ ಎನ್ನುವುದು ಗೊತ್ತಿದೆ. ಇವರ ಕೇಸ್‌ಗಳಿಗೆ ಹೆದರಿ ಕೂತರೆ ಅಧ್ಯಕ್ಷ ಸ್ಥಾನಕ್ಕೆ ಅರ್ಹನಾಗುವುದಿಲ್ಲ ಎಂದು ಶಿವಕುಮಾರ್ ಸೂಚ್ಯವಾಗಿ ಹೇಳಿದರು.
Follow us on Social media