ಬೆಂಗಳೂರು: ಸರಿಯಾಗಿ ಸೋಂಕು ಪರೀಕ್ಷೆ ನಡೆಸದೇ ಜನರ ಸಾವಿಗೆ ಕಾರಣವಾಗಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ಕೊಲೆಗುಡಕ ಸರ್ಕಾರ ಎಂದರೆ ತಪ್ಪಾಗುತ್ತದೆಯೇ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.
ಸರ್ಕಾರ ಕೊರೊನಾ ಸೋಂಕು ಪರೀಕ್ಷೆ ಹೆಚ್ಚು ನಡೆಸಿದರೆ ಇನ್ನಷ್ಟು ಸೋಂಕಿತರ ಸಂಖ್ಯೆ ಹೆಚ್ಚಾಗುತ್ತದೆ. ಸೋಂಕಿತರ ಸಂಖ್ಯೆ ಗನುಗುಣವಾಗಿ ಅ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕಾಗುತ್ತದೆ ಎನ್ನುವ ಕಾರಣಕ್ಕೆ ಸರ್ಕಾರ ಸಮರ್ಪಕವಾಗಿ ಸೋಂಕು ಪರೀಕ್ಷೆ ಹೆಚ್ಚು ನಡೆಸದೇ ಜನರ ಸಾವಿಗೆ ಕಾರಣವಾಗುತ್ತಿದೆ ಎಂದು ಆರೋಪಿಸಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ರಾಜ್ಯದಲ್ಲಿ ಕೇವಲ 59 ಮಾತ್ರ ಕೋವಿಡ್ ಪರೀಕ್ಷಾ ಕೇಂದ್ರಗಳಿದ್ದು, ಅವುಗಳ ದಿನದ ಪರೀಕ್ಷಾ ಸಾಮರ್ಥ್ಯ 31,116 ಮಾತ್ರ. ಪ್ರಸಕ್ತ ಪ್ರತಿದಿನ ನಡೆಯುತ್ತಿರುವುದು ಕೇವಲ 13, 910 ಪರೀಕ್ಷೆ ಮಾತ್ರ. ಅಂದರೆ ಒಟ್ಟು ಸಾಮರ್ಥ್ಯದ ಶೇಕಡ 44.7 ರಷ್ಟು ಮಾತ್ರ ಬಳಕೆಯಾಗುತ್ತಿದೆ. ಇದು ರಾಜ್ಯ ಸರ್ಕಾರದ ಅಯೋಗ್ಯತೆಗೆ ಸಾಕ್ಷಿಯಾಗಿದೆ ಎಂದು ಟೀಕಿಸಿದ್ದಾರೆ.
Follow us on Social media