ಬೆಂಗಳೂರು: ನವರಸ ನಾಯಕ ಜಗ್ಗೇಶ್ ಜೊತೆಗಿನ ಅಭಿಮಾನಿಗಳ ಕಿರಿಕ್ ಎರಡು ಮೂರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಮೈಸೂರಿನಲ್ಲಿ ಜಗ್ಗೇಶ್ ಅವರನ್ನು ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ ಬಗ್ಗೆ ಪರ ಹಾಗೂ ವಿರುದ್ಧವಾದ ಅಭಿಪ್ರಾಯಗಳು ಕೇಳಿಬರುತಿತ್ತು. ಈ ಬಗ್ಗೆ ಇಂದು ಸಹ ಜಗ್ಗೇಶ್ ಬನ್ನೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ಇಷ್ಟಾದರೂ ದರ್ಶನ್ ಫೋನ್ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಎಲ್ಲಾ ವಿವಾದಗಳಿಗೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ‘ಡಿ’ಬಾಸ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊನೆಗೂ ಮೌನ ಮುರಿದಿದ್ದಾರೆ.
ಖಾಸಗಿ ವಾಹಿನಿಯೊಂದರ ಜೊತೆ ಮಾತನಾಡಿರುವ ದರ್ಶನ್, ಈ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ. ಬಂದಿದ್ದರೆ, ಅಭಿಮಾನಿಗಳಿಗೆ ಎರಡು ಬಿಟ್ಟು ಬುದ್ದಿ ಹೇಳುತ್ತಿದೆ. ಜಗ್ಗೇಶ್ ಸರ್ ಹಿರಿಯರು, ಅವರು ನಮ್ಮ ಮುಂದಿರಬೇಕು, ನನ್ನಿಂದ ಹಾಗೂ ಅಭಿಮಾನಿಗಳಿಂದ ಜಗ್ಗೇಶ್ ಅವರಿಗೆ ಬೇಸರಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದರು.
ಜಗ್ಗೇಶ್ ಅವರ ಸಂಪರ್ಕಕ್ಕೆ ಪ್ರಯತ್ನಿಸಿದೆ ಆದರೆ, ಅವರು ಸಂಪರ್ಕಕ್ಕೆ ಸಿಗಲಿಲ್ಲ. ಜಗ್ಗೇಶ್ ಅವರು ಮನೆಗೆ ಬಂದರೆ ಅತಿಥ್ಯ ನೀಡುತ್ತೇನೆ ಎಂದು ರೇಸ್ ಅಂತಾ ಬಂದಾಗ ರೇಸ್ ಗೆ ನಿಲ್ಲುತ್ತೇನೆ, ನಮ್ಮದು ಹೊಟ್ಟೆಪಾಡು ಅದಕ್ಕಾಗಿ ರೇಸ್ ಗೆ ನಿಲ್ಲುತ್ತೇನೆ ಎಂದು ದರ್ಶನ್ ಮಾರ್ಮಿಕವಾಗಿ ತಿರುಗೇಟು ನೀಡಿದರು.
Follow us on Social media