ಬೆಂಗಳೂರು : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಟ್ವೀಟ್ ಮೂಲಕ ತಿವಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ರಾಜ್ಯದ ಬಿಜೆಪಿ ಮುಖಂಡರು ಒಬ್ಬೊಬ್ಬರಾಗಿಯೇ ಟ್ವೀಟ್ ಮೂಲಕವೇ ತರಾಟೆಗೆತ್ತಿಕೊಳ್ಳುತ್ತಿದ್ದಾರೆ.
ಇದೀಗ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್, “ನೀವು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆಶಿಗೆ ನೀಡುತ್ತಿರುವ ಬೆಂಬಲ ಎಂಥದ್ದುಎಂದು ತಿಳಿದಿಲ್ಲವೇ ? ಎಂದು ಸಿದ್ದರಾಮಯ್ಯ ಅವರ ಕಾಲೆಳೆದಿದ್ದಾರೆ.
ಚೀನಾ ಎರಡು ಕಿಲೋಮೀಟರ್ ಹಿಂದೆ ಸರಿದಿದೆ ಎಂದು ಹೇಳಲು ನೀವೇನು ರಕ್ಷಣಾ ಸಚಿವರೇ ಬಿ.ಎಲ್.ಸಂತೋಷ್ ಅವರನ್ನು ಪ್ರಶ್ನಿಸಿದ್ದ ಸಿದ್ದರಾಮಯ್ಯ ಅವರಿಗೆ ” ಚೀನಾ ಸೇನೆ ಒಳಬಂದಿದೆ ಎನ್ನಲು ರಾಹುಲ್ ಗಾಂಧಿ ಅಲ್ಲಿಗೆ ತೆರಳಿದ್ದರೆ, ಗಡಿಯಲ್ಲಿ ಸ್ಥಿತಿಯೇನು? ಅದರ ಪ್ರಕ್ರಿಯೆಗಳೇನು ಅರಿಯಿರಿ. ತಂತ್ರಜ್ಞಾನದ ಯುಗದಲ್ಲಿ ಸುಳ್ಳು ಹೇಳಿ ಜನರನ್ನು ನಂಬಿಸಲು ಸಾಧ್ಯವಿಲ್ಲ ಎನ್ನುವುದು ನಿಮಗೆ ತಿಳಿದಿರಲಿ ಎಂದು ಸಂಸದರು ಹೇಳಿದ್ದಾರೆ.
ಕಾಂಗ್ರೆಸ್ ನೊಳಗೆ ನೀವು ನಡೆಸಿದ ರಾಜಕೀಯವೇನು ಕಡಿಮೆಯೇ. ನಿಮ್ಮನ್ನು ಪಕ್ಷಕ್ಕೆ ಕರೆತರಲು ಕಾರಣೀಕತೃರಾದ ಎಚ್. ವಿಶ್ವನಾಥ ಅವರೇ ಪಕ್ಷ ತೊರೆಯುವಂತಾಯಿತಲ್ಲವೆ. ಎಲ್ಲರೂ ನಿಮ್ಮಂತೆ ಎಂದು ಭಾವಿಸಬೇಡಿ ಎಂದು ನಳಿನ್ ಕುಟುಕಿದ್ದಾರೆ.
Follow us on Social media