ಚಿಕ್ಕಮಗಳೂರು: ಇತ್ತೀಚೆಗಷ್ಟೇ ದೇವರ ನಾಡು ಕೇರಳದಲ್ಲಿ ಅನಾನಸ್ ನಲ್ಲಿ ಸ್ಫೋಟಕ ಇಟ್ಟು ಗರ್ಭಿಣಿ ಆನೆಯೊಂದನ್ನು ಕೊಂದ ದುರಂತದ ನಡುವೆಯೇ ರಾಜ್ಯದ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಹಲಸಿನ ಹಣ್ಣಿಗೆ ವಿಷ ಹಾಕಿ ದನಗಳನ್ನು ಕೊಂದಿರುವ ಅಮಾನವೀಯ ಘಟನೆ ವರದಿಯಾಗಿದೆ.
ಹಲಸಿನ ಹಣ್ಣಿಗೆ ವಿಷ ಬೆರಸಿ ಮೂರು ದನಗಳನ್ನು ಕೊಂದಿರುವ ಪ್ರಕರಣ ಚಿಕ್ಕಮಗಳೂರು ತಾಲೂಕಿನ ಬಸರವಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ತೋಟಕ್ಕೆ ದನಗಳು ಬೇಕಾಬಿಟ್ಟಿ ನುಗ್ಗುತ್ತಿವೆ ಎಂಬ ಕಾರಣಕ್ಕೆ ಕಿಡಿಗೇಡಿಗಳು ಹಲಸಿನ ಹಣ್ಣಿಗೆ ವಿಷ ಬೆರಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಷಪೂರಿತ ಹಲಸಿನ ಹಣ್ಣು ತಿಂದ ಸಾವನ್ನಪ್ಪಿದ ಮೂರು ಹಸುಗಳು ಕಿಟ್ಟೆಗೌಡ ಹಾಗೂ ಮಧು ಎಂಬುವವರಿಗೆ ಸೇರಿವೆ.
ಘಟನೆಗೆ ಸಂಬಂಧಿಸಿದಂತೆ ಅಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Follow us on Social media