ಚಿಕ್ಕಬಳ್ಳಾಪುರ : ಶಾಸಕ ಪ್ರದೀಪ್ ಈಶ್ವರ್ ಮತ್ತು ಮಾಜಿ ಸಚಿವ ಡಾ. ಸುಧಾಕರ್ ನಡುವೆ ವಾರ್ ಮುಂದುವರೆದಿದ್ದು, ಸುಧಾಕರ್ ಅವರ ಸವಾಲನ್ನು ನಾನು ಸ್ಪೀಕರಿಸುತ್ತೇನೆ. ಆದರೆ ಅವರು ಕೋವಿಡ್ ಸಂದರ್ಭದಲ್ಲಿ ಏನೂ ಭ್ರಷ್ಟಾಚಾರ ನಡೆಸಿಲ್ಲ ಅಂತ ಮೊದಲು ಬೋಗನಂದೀಶ್ವರ ದೇವಸ್ಥಾನದಲ್ಲಿ ದೀಪ ಹಚ್ಚಲಿ. ನಾನೂ ಬಂದು ದೀಪ ಹಚ್ಚುತ್ತೇನೆ ಎಂದು ಪ್ರದೀಪ್ ಈಶ್ವರ್ ಸವಾಲು ಹಾಕಿದ್ದಾರೆ.
ನಿವೇಶನಗಳ ಹಂಚಿಕೆ ವಿಚಾರದಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರು ಬೋಗನಂದೀಶ್ವರ ದೇಗುಲದಲ್ಲಿ ದೀಪ ಹಚ್ಚಲಿ ಎಂದು ಹಾಕಿರುವ ಸವಾಲಿನ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶಾಸಕ ಪ್ರದೀಪ್ ಈಶ್ವರ್, ನಾನು ಅವರ ಸವಾಲು ಸ್ವೀಕರಿಸುವೆ. ಆದರೆ ಅವರು ಕೋವಿಡ್ ವೇಳೆ ಏನೂ ಭ್ರಷ್ಟಾಚಾರ ನಡೆಸಿಲ್ಲ ಅಂತ ದೀಪ ಹಚ್ಚಲಿ ಎಂದು ಸವಾಲು ಹಾಕಿದ್ದಾರೆ.
ಇನ್ನು ಕ್ಷೇತ್ರದಲ್ಲಿ ವಸತಿ ಯೋಜನೆಗಳ ಹಕ್ಕು ಪತ್ರಗಳ ವಿತರಣೆಯಲ್ಲಿ ಬೋಗಸ್ ಆಗಿದ್ದು, ಅದನ್ನು ನಾವು ಎಸ್‌ಐಟಿ ತನಿಖೆಗೆ ಆದೇಶಿಸುತ್ತೇವೆ. ನಾವು ಅಂತೂ ಸುಮ್ಮನೆ ಬಿಡಲ್ಲ ಎಂದು ಹೇಳಿದ್ದಾರೆ.
Follow us on Social media