ಚಾಮರಾಜನಗರ: ಮಹದೇಶ್ವರಬೆಟ್ಟದಿಂದ ಮುಸುಕಿನ ಜೋಳ ತುಂಬಿಕೊಂಡು ಗೋಪಿನಾಥಂ ಕಡೆಗೆ ತೆರಳುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಂಪ್ ಹೌಸ್ ಕಟ್ಟಡಕ್ಕೆ ಡಿಕ್ಕಿಹೊಡೆದು ಜಖಂ ಗೊಂಡಿರುವ ಘಟನೆ ಪಾಲಾರ್ ಕಡೆ ಬೆಟ್ಟದ ಇಳಿಜಾರಿನಲ್ಲಿ ಸಂಭವಿಸಿದೆ.
ಪಂಪ್ ಹೌಸ್ ಕಟ್ಟಡಕ್ಕೆ ಲಾರಿ ಡಿಕ್ಕಿಹೊಡೆದ ಪರಿಣಾಮ ಲಾರಿಯ ಮುಂಭಾಗ ಜಖಂ ಗೊಂಡು,ಅದೃಷ್ಟವಶಾತ್ ಚಾಲಕ ಹಾಗೂ ಕ್ಲೀನರ್ ಮತ್ತು ಪಂಪ್‌ಹೌಸ್ ಸಿಬ್ಬಂದಿಗೆ ಯಾವುದೇ
ಹಾನಿ ಸಂಭವಿಸಿಲ್ಲ.
ಲಾರಿ ಅಪಘಾತ ಸಂಬಂಧ ಮಲೆ ಮಹದೇಶ್ವರಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ದೂರು ದಾಖಲಿಸಲಾಗುವುದು ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.
Follow us on Social media