ಬೆಂಗಳೂರು : ಇಂದು ಹುಬ್ಬಳ್ಳಿಯಲ್ಲಿ ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯನ್ನುಬರ್ಬರವಾಗಿ ಹತ್ಯೆ ಮಾಡಿರುವ ಖಂಡನೀಯ, ಕೊಲೆಗಡುಕರನ್ನು ಪತ್ತೆಹಚ್ಚಿ ಅವರಿಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
- ಈ ಕುರಿತು ಮಾತನಾಡಿದ ಅವರು, ಚಂದ್ರಶೇಖರ್ ಗುರುಜಿ ಹತ್ಯೆ ಯನ್ನು ಬಹಳ ಕ್ರೂರವಾಗಿ ಮಾಡಿದ್ದಾರೆ ಹಂತಕರಿಗಾಗಿ ತೀವ್ರರ ಹುಡುಕಾಟ ಮಾಡಲಾಗುತ್ತಿದ್ದು, ತನಿಕೆಯಿಂದ ನಿಖರ ಮಾಹಿತಿ ಲಭ್ಯವಾಗಲಿದೆ. ಹತ್ಯೆ ಪ್ರಕರಣ ಸಂಬಂಧ ಹುಬ್ಬಳ್ಳಿ ಧಾರವಾಡ ಕಮೀಷನರ್ ನಿಂದ ಮಾಹಿತಿ ಪಡೆದಿದ್ದೇನೆ ಎಂದರು.ಇನ್ನು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಲಾಬೈರಾಮ್ ಮಾಹಿತಿ ನೀಡಿ, ಗುರೂಜಿ ಕೊಲೆ ಆರೋಪಿಗಳನ್ನು ಶೀಘ್ರವೇ ಬಂಧಿಸ್ತೇವೆ. ಎಸಿಪಿ ರ್‍ಯಾಂಕ್ ಅಧಿಕಾರಿಗಳಿಂದ ತನಿಖೆ ಮಾಡಿಸುತ್ತೇವೆ. ಇನ್ನು ಆರೋಪಿಗಳ ಶೋಧಕ್ಕಾಗಿ ಐದು ಪ್ರತ್ಯೇಕ ತಂಡ ರಚನೆ ಮಾಡಲಾಗಿದ್ದು, ಆರೋಪಿಗಳನ್ನ ಶೀಘ್ರ ಬಂದಿಸುತ್ತೇವೆ ಎಂದು ಹೇಳಿದ್ದಾರೆ.