ಬೆಂಗಳೂರು : ಕೆ.ಎಸ್.ಆರ್.ಟಿ.ಸಿ. ಬಸ್ಸುಗಳ ಸಂಚಾರ ಸಮಯದಲ್ಲಿ ಬದಲಾವಣೆ ಮಾಡಿದ್ದು, ಉತ್ತರ ಕರ್ನಾಟಕ ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗಿದೆ.
ಈ ಹಿಂದೆ ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆ ಒಳಗಾಗಿ ಸಂಚಾರವನ್ನು ಮುಕ್ತಾಯ ಮಾಡಲಾಗುತ್ತಿತ್ತು. ಈ ಆದೇಶವನ್ನು ಗುರುವಾರದಿಂದ ಮಾರ್ಪಡಿಸಲಾಗಿದೆ. ಕೊನೆಯ ಬಸ್ಸು ಸಂಜೆ 7 ಗಂಟೆಗೆ ಕೆಂಪೇಗೌಡ ಬಸ್ ನಿಲ್ದಾಣವನ್ನು ಬಿಡಲಿದ್ದು, ಇದರಿಂದ ದೂರದ ಉತ್ತರ ಕರ್ನಾಟಕದ ನಗರಗಳನ್ನು ತಲುಪಲು ಸಹಕಾರಿಯಾಗಲಿದೆ.
ಕಲಬುರುಗಿ, ಬೀದರ್ ನಗರಗಳ ಬಸ್ ಗಳು ಸಂಜೆ 7 ಗಂಟೆಗೆ ಬೆಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ ತಲುಪಲಿದೆರ. ಇದು ಎಲ್ಲಾ ಸ್ಥಳಗಳಿಗೆ ಕಾರ್ಯಾಚರಣೆಯಾಗುವ ಬಸ್ಸುಗಳಿಗೂ ಅನ್ವಯಿಸುತ್ತದೆ. ಇದೇ ಮಾದರಿಯ ಬಸ್ಸುಗಳ ಕಾರ್ಯಾಚರಣೆಗಳನ್ನು ಮುಂದಿನ ಆದೇಶದವರೆಗೂ ಮುಂದುವರೆಸಲಾಗುವುದು ಎಂದು ಕೆ.ಎಸ್.ಆರ್.ಟಿ.ಸಿ. ಪ್ರಕಟಣೆ ತಿಳಿಸಿದೆ.
ಪ್ರಯಾಣಿಕರು ಮುಂಗಡ ಟಿಕೇಟು ಕಾಯ್ದಿರಿಸಲು ಕೋರಿದ್ದು, ಇದಕ್ಕಾಗಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಬಾಗಲಕೋಟೆ, ಬೆಳಗಾವಿ, ವಿಜಯಪುರ, ಬಳ್ಳಾರಿ, ಕುಂದಾಪುರ, ಚಿಕ್ಕಮಗಳೂರು, ದಾವಣಗೆರೆ, ಧಾರವಾಡ, ಕಲಬುರ್ಗಿ, ಹುಬ್ಬಳ್ಳಿ, ಹೊಸಪೇಟೆ, ಹಾವೇರಿ, ಹರಪ್ಪನಹಳ್ಳಿ, ಕೊಪ್ಪಳ, ಕಾರವಾರ, ಮಂಗಳೂರು, ಮಡಿಕೇರಿ, ಮೈಸೂರು, ರಾಯಚೂರು, ಶಿವಮೊಗ್ಗ, ಶಿರಸಿ, ವಿಜಯಪುರ, ಉಡುಪಿ, ಯಾದಗಿರಿ. ಬೆಳಗಾವಿ, ಬಳ್ಳಾರಿ, ಕುಂದಾಪುರ, ಚಿಕ್ಕಮಗಳೂರು, ದಾವಣಗೆರೆ, ಕಲಬುರ್ಗಿ, ಗಂಗಾವತಿ, ಹುಬ್ಬಳ್ಳಿ, ಹಡಗಲಿ, ಹರಿಹರ, ಹೊಸಪೇಟೆ, ಕಂಪ್ಲಿ, ಕುಂದಾಪುರ, ಕುಮಟಾ, ಕೊಪ್ಪಳ, ಕುಷ್ಠಗಿ, ಮಂಗಳೂರು, ಮಡಿಕೇರಿ, ಮೈಸೂರು, ವಿಜಯಪುರ, ಸಂಡೂರು, ಶಿವಮೊಗ್ಗ, ಶಿರಗುಪ್ಪ, ಶಿರಸಿ, ಉಡುಪಿ, ಯಾದಗಿರಿ, ಯಲಬುರ್ಗ, ಯಲ್ಲಾಪುರ ದಿಂದ ಬೆಂಗಳೂರಿಗೆ ಮುಂಗಡ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ ಮಾಡಲಾಗಿದೆ.
ಪ್ರಯಾಣಿಕರು ಕೆ.ಎಸ್.ಆರ್.ಟಿ.ಸಿ. ವೆಬ್ಸೈಟ್ www.ksrtc.in ಮೂಲಕ ಅಥವಾ ನಿಗಮದ ಟಿಕೇಟು ಕೌಂಟರುಗಳು, ಫ್ರಾಂಚೈಸಿ ಕೌಂಟರುಗಳ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಬಹುದಾಗಿದೆ.
Follow us on Social media