ಬೆಂಗಳೂರು: ಇನ್ನು ಮುಂದೆ ವಿವಾಹ ನೋಂದಣಿ ಪ್ರಮಾಣ ಪತ್ರ ನೀಡುವ ಅಧಿಕಾರವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ನೀಡಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇನ್ನು ಮುಂದೆ ಗ್ರಾಮಸ್ಥರು ತಮ್ಮ ತಮ್ಮ ಗ್ರಾಮ ಪಂಚಾಯಿತಿಗಳಲ್ಲೇ ವಿವಾಹ ನೋಂದಣಿ ಮಾಡಿಕೊಳ್ಳಬಹುದು.
ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ವಿವಾಹ ನೋಂದಣಿ ಸೇವೆ ಲಭ್ಯವಿದ್ದು, ಪಿ.ಡಿ.ಒ.ಗಳಿಗೆ ವಿವಾಹ ನೋಂದಣಿ ಪ್ರಮಾಣ ಪತ್ರ ನೀಡುವ ಅಧಿಕಾರ ನೀಡಲಾಗಿದೆ.
ಇದರ ಜೊತೆಗೆ ಜನನ ಹಾಗೂ ಮರಣ ನೋಂದಣಿ ಪ್ರಮಾಣ ಪತ್ರವೂ ಗ್ರಾಮ ಕಚೇರಿಯಲ್ಲೇ ಸಿಗಲಿದೆ. ಈ ನಿರ್ಧಾರದಿಂದ ಜನರ ಸಮಯ ಉಳಿತಾಯ ಹಾಗೂ ನೋಂದಣಿ ಪತ್ರಕ್ಕಾಗಿ ತಾಲೂಕು ಮತ್ತು ಜಿಲ್ಲಾ ಕೇಂದ್ರಕ್ಕೆ ಅಲೆದಾಡುವುದು ತಪ್ಪಲಿದೆ.
Follow us on Social media